ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಗಬ್ಬೆದ್ದು ನಾರುತ್ತಿದೆ ಅಣ್ಣಿಗೇರಿಯ ಗದಗ ರಸ್ತೆ, ಪಡಿತರ ಅಕ್ಕಿ ರಸ್ತೆ ಪಾಲು

ಅಣ್ಣಿಗೇರಿ : ಪಟ್ಟಣದ ಗದಗ ರಸ್ತೆಯ ಬಾಪೂಜಿ ಶಾಲೆ ಮುಂಭಾಗದಲ್ಲಿ ಪಡಿತರ ಅಕ್ಕಿಯನ್ನು ನೀರಿನಲ್ಲಿ ಹಾಕಿದರ ಪರಿಣಾಮ ದುರ್ನಾತದ ವಾತಾವರಣ ಹಬ್ಬುತ್ತಿದೆ. ಹೌದು...ಕಳೆದ ತಿಂಗಳು ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಸ್ಥಳೀಯ ನ್ಯಾಯಬೆಲೆ ಅಂಗಡಿಯಲ್ಲಿದ್ದ ಅಕ್ಕಿ, ಗೋಧಿ ಸಿಲುಕಿ ಹಾಳಾದ ಘಟನೆ ಸಂಭವಿಸಿತ್ತು. ಮಳೆಯ ನೀರಿಗೆ ಸಿಲುಕಿದ ಅಕ್ಕಿಯನ್ನು ಗದಗ ರಸ್ತೆಯಲ್ಲಿರುವ ತಗ್ಗು ಪ್ರದೇಶದಲ್ಲಿ ಹಾಕಿದರ ಪರಿಣಾಮ ಅದು ಇಂದು ದುರ್ನಾತದ ವಾತಾವರಣ ನಿರ್ಮಾಣವಾಗಿ ಅಕ್ಕಪಕ್ಕದ ಜನರಿಗೆ ಅನಾರೋಗ್ಯದ ಸ್ಥಿತಿಯನ್ನು ಉಂಟು ಮಾಡಿದೆ.

ಗುಂಡಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು ಹಾಕಿದ್ದರಿಂದ ಈ ವಾತಾವರಣ ನಿರ್ಮಾಣವಾಗಿದೆ. ದುರ್ನಾತಕ್ಕೆ ಕೆಲ ಜನರು ವಾಂತಿ ಮಾಡುತ್ತಿರುವುದು ಕೂಡಾ ಇಲ್ಲಿ ಕಂಡು ಬಂದಿದೆ. ಈ ಕುರಿತು ತಹಶೀಲ್ದಾರ ಹಾಗೂ ಮುಖ್ಯಾಧಿಕಾರಿ ಗಮನಕ್ಕೆ ತಂದರೂ ಕೂಡಾ ಇಲ್ಲಿಯವರೆಗೂ ಯಾವುದೇ ಪರಿಹಾರ ಕಂಡು ಕೊಂಡಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ. ಪಕ್ಕದಲ್ಲೇ ಇರುವ ಬಾಪೂಜಿ ಶಾಲೆಯ ಪಾಲಕರಿಗೂ ಕೂಡಾ ಭಯದ ವಾತಾವರಣ ನಿರ್ಮಾಣವಾಗಿದೆ.

ತಗ್ಗು ಪ್ರದೇಶದಲ್ಲಿ ಬಿಸಾಕಿದ ಪಡಿತರ ಅಕ್ಕಿಗೆ ಯಾರು ಜವಾಬ್ದಾರಿ ? ಸಂಬಂಧಿಸಿದ ಅಧಿಕಾರಿಗಳು ಇದರ ಕಡೆ ಯಾಕೆ ಗಮನ ಹರಿಸಿಲ್ಲ ? ಎನ್ನುತ್ತಾರೆ ಸ್ಥಳೀಯರು. ಜಿಲ್ಲಾ ಹಾಗೂ ತಾಲೂಕು ಆಹಾರ ನಿರೀಕ್ಷಕರೆ ಇದರ ಕಡೆ ನೀವಾದರೂ ಸ್ವಲ್ಪ ಗಮನ ಹರಿಸಿ...

Edited By : Shivu K
Kshetra Samachara

Kshetra Samachara

08/11/2021 04:24 pm

Cinque Terre

21.65 K

Cinque Terre

1

ಸಂಬಂಧಿತ ಸುದ್ದಿ