ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾಯವಾದ ಸಾರ್ವಜನಿಕ ಶೌಚಾಲಗಳು- ಪಾಲಿಕೆ ವಿರುದ್ಧ ಆಕ್ರೋಶಗೊಂಡ ಸಾರ್ವಜನಿಕರು

ಹುಬ್ಬಳ್ಳಿ: ಸರ್ಕಾರ ಬಯಲು ಬಹಿರ್ದೆಸೆ ಮುಕ್ತಕ್ಕೆ ಶ್ರಮಿಸುತ್ತಿದ್ದರೇ, ಇತ್ತ ಸ್ಮಾರ್ಟ್ ಸಿಟಿ ಹಣೆ ಪಟ್ಟಿ ಹೊತ್ತಿರುವ ಹುಬ್ಬಳ್ಳಿ ಧಾರವಾಡದಲ್ಲಿ ಕಾಂಪೌಂಡ್ ಗಳು, ಬಯಲೇ ನಿತ್ಯವೂ ಶೌಚಾಲಯವಾಗಿ ಮಾರ್ಪಟ್ಟಿವೆ.

ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರು ಸಹ ನಗರ ಪ್ರದೇಶಗಳಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದರೇ, ಇನ್ನು ಕೆಲವು ಕಡೆಗಳಲ್ಲಿ ಪಾಲಿಕೆಯೇ ಶೌಚಾಲಯಗಳನ್ನು ತೆರವುಗೊಳಿಸಿದ್ದು, ಪರಿಣಾಮ ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿಯುವಂತಾಗಿದೆ.

ವಾರ್ಡ್ ನಂಬರ 71 ರಲ್ಲಿ ಬರುವ ಹಳೇಹುಬ್ಬಳ್ಳಿ, ಟಿಪ್ಪುನಗರ,‌ ನ್ಯೂ ಇಂಗ್ಲಿಷ್ ಸ್ಕೂಲ್ ಸೇರಿದಂತೆ ಹಲವಾರು ಕಡೆಗಳಲ್ಲಿ ಈ ಸಮಸ್ಯೆ ಸರ್ವೇಸಾಮಾನ್ಯ ಎನಿಸಿ ಬಿಟ್ಟಿದೆ. ಪರಿಣಾಮ ಸಾರ್ವಜನಿಕ ಶೌಚಾಲಯ ತೆಗೆದು ಹಾಕಿದ ಪಾಲಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾಲಿಕೆ ಅಧಿಕಾರಿಗಳು ಕೂಡಲೇ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ಈರಣ್ಣ ವಾಲಿಕಾರ,

ಪಬ್ಲಿಯ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

30/10/2021 04:15 pm

Cinque Terre

38.55 K

Cinque Terre

6

ಸಂಬಂಧಿತ ಸುದ್ದಿ