ನವಲಗುಂದ : ಇದ್ಯಾವ್ದೋ ಪಾರ್ಕಿಂಗ್ ಸ್ಥಳ ಅಂತ ತಿಳಿಬ್ಯಾಡ್ರಿ ಮತ್ತ, ಇದು ನಮ್ಮ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಅಯ್ತಿ, ಅರೆ ಮತ್ತ ಇಲ್ಲಿ ಹಿಂಗ ಯಾಕ ವಾಹನಗಳನ್ನ ಪಾರ್ಕಿಂಗ್ ಮಾಡ್ಯಾರ ಅಂತಿರೆನ್ರಿ, ಯಾಕಂದ್ರ ಇದು ಯಮನೂರ ಗ್ರಾಮ ಬಳಿಯ ಪವಿತ್ರ ಬೆಣ್ಣೆ ಹಳ್ಳಕ್ಕ ಬಂದ ಭಕ್ತರ ವಾಹನಗಳು ಇದಾವ...
ಇದು ನಮ್ಮ ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದ ಬಳಿಯ ಬೆಣ್ಣೆ ಹಳ್ಳದ ಸೇತುವೆ ಮ್ಯಾಲೆ ನಿಲ್ಸಿರೋ ವಾಹನಗಳು ನೋಡ್ರಿ, ಹಿಂಗ ಸಾಲುಗಟ್ಟಿ ನಿಂತಿರೋ ವಾಹನಗಳಿಂದ ಇಲ್ಲಿ ಈಗ ಅಪಘಾತದ ಭಯ ಹೆಚ್ಚಾದಂತ ಆಗೇತಿ, ಮೊದ್ಲ ಈ ರಸ್ತೆ ಒಳಗ ಬೃಹತ್ ಗಾತ್ರದ ವಾಹನಗಳು ಅತೀ ವೇಗವಾಗಿ ಸಂಚಾರ ಮಾಡ್ತಾವ್ರಿ, ಇಂತಾದ್ರಾಗ ಇಲ್ಲಿ ಭಕ್ತರ ವಾಹನ ಪಾರ್ಕಿಂಗ್ ಮಾಡಿ, ಅಪಾಯಕ್ಕ ಆಹ್ವಾನ ಕೊಡುವಂಗ ಕಾಣಾಕತ್ತಾವ, ಇನ್ನು ಇಲ್ಲಿಗೆ ಬರುವ ಭಕ್ತರಿಗ ಅಂತಾನ ಈ ರಸ್ತೆ ಬಿಟ್ಟ ಕೆಳಗಡೆ ಸುಸರ್ಜಿತ ರಸ್ತೆ ಮತ್ತ ಪಾರ್ಕಿಂಗ್ ಅಯ್ತ್ರಿ, ಆದ್ರ ಭಕ್ತರ ಮಾತ್ರ ಅಲ್ಲಿ ಹೋಗೋದಿಲ್ಲ ಅಂತಾರ, ಇದರಿಂದ ತೊಂದ್ರೆ ಆಗೋದ ಭಕ್ತರಿಗೆ ಅಲ್ವೇನ್ರಿ, ಈ ಬಗ್ಗೆ ನಿಮ್ಮ ಪಬ್ಲಿಕ್ ಯಮನೂರ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ಕೇಳಿದಾಗ ಅವರು ಹೇಳಿದ್ದು ಹೀಗೆ...
ಒಟ್ಟಾರೆಯಾಗಿ ಇಲ್ಲಿ ಪಾರ್ಕಿಂಗ್ ಮಾಡಿ, ಭಕ್ತರು ಇಲ್ಲಿ ಸಂಚಾರ ಮಾಡೋದು ತುಂಬಾ ಅಪಾಯಕಾರಿ ನೋಡ್ರಿ, ಅದಕ್ಕ ಅಧಿಕಾರಿಗಳ ಜೊತೆ ಭಕ್ತರು ಕೈ ಜೋಡಿಸಿ, ಪಾರ್ಕಿಂಗ್ ಜಾಗದಾಗ ವಾಹನ ನಿಲ್ಲಿಸಬೇಕ್ರಿ, ಇದ್ರಿಂದ ಅಪಘಾತದ ಆತಂಕ ಕೂಡ ದೂರ ಆಕೇತಿ, ಮತ್ತ ಹೆದ್ದಾರಿ ಮೇಲಿನ ಟ್ರಾಫಿಕ್ ಸಮಸ್ಯೆ ಕೂಡ ದೂರ ಆಗುತೆ, ಇನ್ನು ಭಕ್ತರು ಸುರಕ್ಷಿತವಾಗಿ ಬೆಣ್ಣೆ ಹಳ್ಳದಾಗ ಸ್ನಾನ ಮಾಡಿ, ಚಾಂಗದೇವನ ದರ್ಶನ ಪಡ್ಯಾಕ ಅನುಕೂಲ ಆಕೇತ್ರಿ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
29/10/2021 10:16 am