ಕುಂದಗೋಳ: ತಾಲೂಕಿನ ಮಾಜಿ ಶಾಸಕ ದಿ. ಗೋವಿಂದಪ್ಪ ಹ ಜುಟ್ಟಲ್ ಪ್ರತಿಷ್ಠಾನ ಸಮಿತಿ, ಕಮಡೊಳ್ಳಿ ಇವರು ಬು-ತರ್ಲಘಟ್ಟ ಮತ್ತು ನೆಲಗುಡ್ಡ ಗ್ರಾಮದಲ್ಲಿ ಜರುಗಿದ ವಾಲ್ಮೀಕಿ ಜಯಂತಿ ದಿನದಂದು ಕೋವಿಡ್ ಸವಾಲಿನ ನಡುವೆಯೂ 2020-21ನೇ ಸಾಲಿನ ಸಮಾಜ ಸೇವೆಯನ್ನು ಗುರುತಿಸಿ ಸಂಪನ್ನತೆಯನ್ನು ಪ್ರಶಂಸಿಸಿ ಸಮಾಜ ಸೇವಕ ಭರಮಗೌಡ ದ್ಯಾವನಗೌಡ್ರ ಇವರಿಗೆ ಮಹರ್ಷಿ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ. ಪ್ರಶಸ್ತಿ ಪಡೆದ ಭರಮಗೌಡ ದ್ಯಾವನಗೌಡ್ರ ಪ್ರತಿಷ್ಠಾನ ಹಾಗೂ ತಾಲೂಕಿನ ಗಣ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
26/10/2021 07:36 pm