ಕುಂದಗೋಳ : ಕೇವಲ ಮೂರು ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮಾಡಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ್ರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕೇಂದ್ರ ಸಚಿವ್ರು ಸೇರಿ ಎಂಎಲ್ಎ'ವರೆಗೂ ಮನವಿ ಸಲ್ಲಿಸಿ ಸುಸ್ತಾದ ಗ್ರಾಮಸ್ಥರು ಇಂದು ಅಮರನಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳವ ಎಚ್ಚರಿಕೆಯನ್ನು ತಾಪಂ ಅಧಿಕಾರಿಗಳಿಗೆ ನೀಡಿದ್ದಾರೆ.
ಹೌದು ! ಸ್ವಾತಂತ್ರ್ಯ ಲಭಿಸಿ 74 ವರ್ಷ ಕಳೆಯುತ್ತಾ ಬಂದರೂ ಇಂದಿಗೂ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ತಲುಪಲು ಯರಿನಾರಾಯಣಪುರದ ಗ್ರಾಮಸ್ಥರಿಗೆ ಸೂಕ್ತ ರಸ್ತೆ ಸೌಲಭ್ಯ ಇಲ್ಲಾ. ಪರ್ಯಾಯ ಮಾರ್ಗ ಅನುಸರಿಸಿ ನಿತ್ಯ 15 ಕಿಲೋ ಮೀಟರ್ ಪ್ರಯಾಣ ಮಾಡಿ ಗುಡೇನಕಟ್ಟಿ ತಲುಪಿ ಕುಂದಗೋಳಕ್ಕೆ ಬರಬೇಕು.
ಈ ವಿಚಾರವಾಗಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಮಾಡಿ ಬೇಸತ್ತ ಗ್ರಾಮಸ್ಥರು, ಇಂದು ತಾ.ಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಶೀಘ್ರ ರಸ್ತೆ ಕಾಮಗಾರಿ ಕುರಿತು ನಿರ್ಧಾರ ಕೈಗೊಳ್ಳದಿದ್ದರೇ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳವ ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಉಪವಾಸ ಸತ್ಯಾಗ್ರಹ ನಿರ್ಧಾರಕ್ಕೆ ಯರಿನಾರಾಯಣಪುರಕ್ಕೆ ರಸ್ತೆ ಭಾಗ್ಯ ಒಲಿದು ಬರುತ್ತಾ ಅಥವಾ ಮತ್ತದೇ ಜನಪ್ರತಿನಿಧಿಗಳ ಹಳೇ ರಾಗ ಮುಂದುವರೆಯುತ್ತಾ ಕಾದು ನೋಡಬೇಕಿದೆ.
Kshetra Samachara
23/10/2021 07:42 pm