ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕಿರು ಸೇತುವೆ

ನವಲಗುಂದ : ಇದು ಯಮನೂರ, ಪಡೆಸೂರ, ಶಾನವಾಡ, ಹಾಲಕುಸುಗಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆ, ಆದರೆ ಯಮನೂರ ಬಳಿ ಇರುವ ಈ ಕಿರು ಸೇತುವೆ ಈಗ ಅಪಾಯಕ್ಕೆ ಆಹ್ವಾನ ಕೊಡುವಂತೆ ಕಾಣುತ್ತಿರುವುದು ವಾಹನ ಸಂಚಾರರಿಗೆ ಆತಂಕ ಹೆಚ್ಚಿಸಿದ್ದಂತು ಸುಳ್ಳಲ್ಲ...

ಯಮನೂರ ಗ್ರಾಮದಿಂದ ಪಡೆಸೂರ, ಶಾನವಾಡ, ಹಾಲಕುಸುಗಲ್ ಗ್ರಾಮಗಳಿಗೆ ಹೋಗುವ ರಸ್ತೆ ಇದಾಗಿದ್ದು, ಇಲ್ಲಿ ದಿನನಿತ್ಯ ಬೃಹತ್ ಗಾತ್ರದ ವಾಹಣಗಳಿಂದ ಹಿಡಿದು ಹಲವಾರು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಆದರೆ ಇಲ್ಲಿ ಸಂಚರಿಸುವ ಯಾರಿಗೂ ಸುರಕ್ಷೆ ಇಲ್ಲಾ ಎನಿಸತೊಡಗಿದೆ. ಯಾಕಂದರೆ ಮೊದಲೇ ಮಳೆಯಿಂದ ಹದಗೆಟ್ಟ ರಸ್ತೆ ಇದು, ಅಂತದ್ರಲ್ಲಿ ಈಗ ಈ ಕಿರು ಸೇತುವೆಯ ಎರಡು ಬದಿಯ ತಡೆಗೋಡೆಗಳು ಬಿಳ್ಳುವ ಆತಂಕ ಹೆಚ್ಚಾಗಿದೆ. ಒಂದು ವೇಳೆ ಇಲ್ಲಿ ವಾಹನ ಸಂಚಾರ ನಡೆಸಿದ ಸಂಧರ್ಭದಲ್ಲಿ ಸಂಪೂರ್ಣ ಬಾಗಿದ ಈ ಸೇತುವೆಯ ತಡೆಗೋಡೆಗಳು ಕುಸಿದು ಬಿದ್ದಿದ್ದೆ ಆದಲ್ಲಿ ರಸ್ತೆ ಕೂಡ ಬಿಳ್ಳುವ ಆತಂಕ ಮನೆ ಮಾಡಿದೆ. ಇದರಿಂದ ವಾಹನ ಸಂಚಾರರಿಗೆ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನಬಹುದು. ಯಾವುದೇ ಅವಘದ ಸಂಭವಿಸುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಇಲ್ಲಿನ ರಸ್ತೆ ಮತ್ತು ಕಿರು ಸೇತುವೆಯ ನಿರ್ಮಾಣಕ್ಕೆ ಮುಂದಾಗಬೇಕಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

22/10/2021 12:32 pm

Cinque Terre

39.38 K

Cinque Terre

0

ಸಂಬಂಧಿತ ಸುದ್ದಿ