ಹುಬ್ಬಳ್ಳಿ: ಗ್ರಾಹಕರು ಬ್ಯಾಂಕ್ ಗಳಲ್ಲಿ ಹೌಸಿಂಗ್ ಲೋನ್, ಎಜುಕೇಶನ್, ವೆಹಿಕಲ್, ಕೃಷಿ, ಮುದ್ರಾ, ರಿಟೇನ್ ಲೋನ್ ಹಾಗೂ ವಿವಿಧ ರೀತಿಯಲ್ಲಿ ಯಾವುದಾದರೂ ಒಂದು ಲೋನ್ ಪಡೆದಿರುತ್ತಾರೆ. ಇನ್ನೂ ಕೆಲವರು ಬೇರೆ ವಲಯಗಳಲ್ಲಿ ಹೆಚ್ಚು ಬಡ್ಡಿಯ ಸಾಲ ಪಡೆದು ಮೀಟರ್ ಹಾಗೂ ಚಕ್ರ ಬಡ್ಡಿ ತುಂಬಿ ಶೋಷಿತರಾಗುತ್ತಿದ್ದಾರೆ. ಆದ್ದರಿಂದ ಯಾರು ಸಾಲ ಸೌಲಭ್ಯ ಪಡೆದಿಲ್ಲವೋ ಅವರು ಬ್ಯಾಂಕ್‌ಗಳಲ್ಲಿ ದೊರೆಯುವ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ರಾಹಕರಲ್ಲಿ ಮನವಿ ಮಾಡಿದರು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಏರ್ಪಡಿಸಿದ ಜಿಲ್ಲಾ ಲೀಡ್ ಬ್ಯಾಂಕ್ ಜಿಲ್ಲಾ ಗ್ರಾಹಕರ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಬೇರೆ ವಲಯಗಳಲ್ಲಿ ಸಾಲ ಕೊಡುವವರು ಬ್ಲ್ಯಾಂಕ್ ಚೆಕ್ ನಲ್ಲಿ ಬರೆಸಿಕೊಂಡು ಲೋನ್ ಕೊಡುತ್ತಾರೆ. ಮುಂದೆ ಹೆಚ್ಚಿನ ಬಡ್ಡಿ ಹಾಗೂ ಚಕ್ರಬಡ್ಡಿ ಹಾಕುತ್ತಾರೆ. ಇದರಿಂದ ಅಸಲು ಸಹ ಕಟ್ಟಲಾಗದೆ ಜನರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಸಾಲದ ಹೊರೆಯಿಂದ ಪಾರಾಗಲು ಪಾಲಕರು ತಮ್ಮ ಮಗುವನ್ನು ಮಾರಿದ ಉದಾಹರಣೆಗಳಿವೆ. ಭಾರತದಲ್ಲಿ ಬ್ಯಾಂಕಿಂಗ್ ಸೆಕ್ಟರ್ ಬೆಳವಣಿಗೆಯಾದರೂ ಸಹ ಇನ್ನು ಲಕ್ಷಾಂತರ ಜನರಿಗೆ ತಲುಪಿಲ್ಲ. ಅದು ಗ್ರಾಮೀಣ ಪ್ರದೇಶಗಳಲ್ಲಿ ತಲುಪಬೇಕು ಎಂದರು.
ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ: ಗ್ರಾಮೀಣ ಪ್ರದೇಶದಲ್ಲಿ ಬಡವರು, ಅನಕ್ಷರಸ್ಥರು ಹಾಗೂ ರೈತರು ಬರುತ್ತಾರೆ. ಅವರಿಗೆ ಕನ್ನಡ ಹೊರತು ಪಡಿಸಿ ಬೇರೆ ಭಾಷೆ ಮಾತನಾಡಲು ಬರದ ಕಾರಣ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
Kshetra Samachara
21/10/2021 03:17 pm