ಕುಂದಗೋಳ : ಕಳೆದು ಹೋದ ಮಕ್ಕಳು, ಬಾಲಾಪರಾಧಕ್ಕೆ ಸಿಕ್ಕ ಮಕ್ಕಳು, ಮನೆಯಿಂದ ಹೊರಬಂದ ಮಕ್ಕಳು, ಆರೋಗ್ಯದ ಸಹಾಯ ಬೇಕಾದ ಮಕ್ಕಳು, ಬಾಲ್ಯ ವಿವಾಹ, ಬಾಲ ಕಾರ್ಮಿಕ, ಮಾನಸಿಕ ಹಾಗೂ ದೈಹಿಕ ಕಿರುಕುಳ, ಜಾಗರೂಕತೆ ಮತ್ತು ಸುರಕ್ಷತೆಯ ಅಗತ್ಯವಿರುವ ಮಕ್ಕಳ ಆರೈಕೆಗಾಗಿ 1098 ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸರ್ಕಾರದ ಅಂಗ ಸಂಸ್ಥೆ ಕರ್ಮಣಿ ಗ್ರಾಮೀಣ ಸೇವಾ ಪ್ರತಿಷ್ಠಾನದ ವತಿಯಿಂದ ಕುಂದಗೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು ಸೇವಾ ಪ್ರತಿಷ್ಠಾನದ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರಿಗೆ ಅರಿವು ಮೂಡಿಸಿದರು.
ಬಳಿಕ ಸಾರ್ವಜನಿಕರಿಗೆ ಭಿತ್ತಿ ಪತ್ರ ನೀಡಿ ಯಾವ ಸಂಖ್ಯೆಗೆ ಕರೆ ಮಾಡಬೇಕು ಯಾವ ತೆರನಾದ ಮಕ್ಕಳಿಗೆ ಈ ಚೈಲ್ಡ್ ಹೆಲ್ಪ್ ಲೈನ್ ಸೇವೆ ಲಭ್ಯ ಎಂಬುದರ ಬಗ್ಗೆ ತಿಳಿಸಿಕೊಟ್ಟರು.
Kshetra Samachara
21/10/2021 12:56 pm