ಹುಬ್ಬಳ್ಳಿ: ಪ್ರಯಾಣಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಹೆಸರುವಾಸಿಯಾಗಿರುವ ನೈಋತ್ಯ ರೈಲ್ವೆ ಈಗ ಮತ್ತಷ್ಟು ಅಧುನಿಕರಣದತ್ತ ಚಿಂತನೆ ನಡೆಸಿದ್ದು, ಈ ಚಿಂತನೆ ಪ್ರಯಾಣಿಕರ ಚಿಂತೆಯನ್ನು ದೂರ ಮಾಡಲಿದೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ನೈಋತ್ಯ ರೈಲ್ವೆಗೆ ಆರ್ಥಿಕ ಹೊರೆ ತಗ್ಗಲಿದೆ.
ಇಷ್ಟುದಿನ ಡಿಸೇಲ್ ಮೂಲಕ ಚಲಿಸುತ್ತಿದ್ದ ರೈಲು ಇನ್ನುಮುಂದೆ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆ ಆಗುವ ಮೂಲಕ ಪರಿಸರ ಸಂರಕ್ಷಣೆ ಪ್ರಮುಖ ಪಾತ್ರ ವಹಿಸಲಿವೆ. ಈಗಾಗಲೇ ಎಲೆಕ್ಟ್ರಿಕ್ ಕಾಮಗಾರಿ ಚುರುಕುಗೊಂಡಿದ್ದು, 2023 ಮಾರ್ಚ್ ಅಂತ್ಯದೊಳಗೆ ನೈಋತ್ಯ ರೈಲ್ವೆ ಸಂಪೂರ್ಣ ವಿದ್ಯುತ್ ಚಾಲಿತ ರೈಲುಗಳಾಗಿ ಪರಿವರ್ತನೆಗೊಳ್ಳಲಿದ್ದು, ಇದರಿಂದ ಇಂಧನದ ಬಹುದೊಡ್ಡ ಆರ್ಥಿಕ ಹೊರೆ ನೈಋತ್ಯ ರೈಲ್ವೆಗೆ ತಪ್ಪಲಿದೆ.
ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಎಕ್ಸ್‌ಪ್ರೆಸ್, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಹಾಗೂ ಹಲವಾರು ಯೋಜನೆ ಹಾಗೂ ಜನಪರ ಕಾರ್ಯದ ಮೂಲಕ ಜನರಿಗೆ ಉತ್ಕೃಷ್ಟ ಮಟ್ಟದ ಸಾರಿಗೆ ಸೇವೆಯನ್ನು ನೀಡುತ್ತ ಬಂದಿರುವ ರೈಲ್ವೆ 2023ರ ಹೊತ್ತಿಗೆ ಜೀರೋ ಕಾರ್ಬನ್ ಎಮಿಟರ್ ಚಿಂತನೆಯನ್ನು ನಡೆಸಿದ್ದು, ಪರಿಸರ ಸಂರಕ್ಷಣೆ ಬಹುದೊಡ್ಡ ಹೊಣೆಯನ್ನು ನೈಋತ್ಯ ರೈಲ್ವೆ ಹೊಂದಿದ್ದು, ಅದಕ್ಕೆ ತಕ್ಕನಾಗಿ ಕಾರ್ಯವೈಖರಿಯನ್ನು ಮೈಗೂಡಿಸಿಕೊಂಡಿದೆ.
ಒಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈಗಾಗಲೇ ಎಲೆಕ್ಟ್ರಿಕ್ ರೈಲುಗಳು ಸಿದ್ಧವಾಗುತ್ತಿವೆ. ಅಲ್ಲದೇ ಎಲೆಕ್ಟ್ರಿಕ್ ಕಾಮಗಾರಿ ಕೂಡ ಪೂರ್ಣಗೊಳ್ಳುವ ಹಂತದಲ್ಲಿವೆ. ಈ ನಿಟ್ಟಿನಲ್ಲಿ ಕೂಡಲೇ ಎಲೆಕ್ಟ್ರಿಕ್ ಕಾಮಗಾರಿ ಪೂರ್ಣಗೊಂಡು ಭಾರತೀಯ ರೈಲ್ವೆಯ ಪರಿಸರ ಸಂರಕ್ಷಣೆ ಕನಸು ನನಸಾಗಲಿ ಎಂಬುವುದು ನಮ್ಮ ಆಶಯ...
ಮಲ್ಲೇಶ ಸೂರಣಗಿ,
ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
12/10/2021 02:19 pm