ಅಣ್ಣಿಗೇರಿ : ಪಟ್ಟಣದ ಜೋಶಿ ಪ್ಲಾಟ್ ನಲ್ಲಿರುವ ಆಕಾಶ ಪಾರ್ಕ ಅಭಿವೃದ್ಧಿ ಕಾಣದೇ ಹಿಂದುಳಿದ ಪ್ರದೇಶವಾಗಿ ಮಾರ್ಪಟ್ಟು ಸ್ಥಳೀಯರ ಕೆಂಗೆಣ್ಣಿಗೆ ಗುರಿಯಾಗಿದೆ.
ಹೌದು....ಪಟ್ಟಣದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ನಿರ್ಮಾಣಗೊಂಡ ಆಕಾಶ ಪಾರ್ಕ್ ಅಭಿವೃದ್ಧಿ ಕಾಣದೇ ಇಂದಿಗೂ ಹಿಂದುಳಿದ ಪ್ರದೇಶವಾಗಿಯೇ ಉಳಿದುಕೊಂಡಿದೆ. ಸರ್ಕಾರದಿಂದ ಅನುಮತಿ ಪಡೆದು ಬಡಾವಣೆ ನಿರ್ಮಾಣವಾಗಿದ್ದರೂ ಕೂಡಾ ಸುಸಜ್ಜಿತವಾದ ರಸ್ತೆ, ಗಟಾರ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲ. ಮಳೆಗಾಲ ಬಂತೆಂದರೆ ಸಾಕು ಸ್ಥಳೀಯರು ಓಡಾಡಲು ಸರಿಯಾದ ವ್ಯವಸ್ಥೆಯಿಲ್ಲ. ಬಡಾವಾಣೆಯಲ್ಲಿ ಬೃಹದಾಕಾರದ ಪಾರ್ಕ್ ಇದ್ದರೂ ಕೂಡಾ ಅಭಿವೃದ್ಧಿ ಕಾಣದೇ ಮುಳ್ಳು ಕಂಟೆಗಳು ಬೆಳೆದು ನಿಂತಿವೆ. ಸ್ಥಳೀಯ ಆಡಳಿತಕ್ಕೆ ಇಲ್ಲಿ ವಾಸಿಸುವ ಕುಟುಂಬಗಳ ತೆರಿಗೆ ಆದಾಯ ಬೇಕು ವಿನ:, ಅಭಿವೃದ್ಧಿ ಬೇಡ ಎನ್ನುವ ಹಾಗೆ ವರ್ತಿಸುತ್ತಿದೆ.
ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಗಟಾರ ನಿರ್ಮಾಣಗೊಂಡಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಬಡಾವಣೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದರೂ ಕೂಡಾ ತಮ್ಮ ಜೀವವನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಬಡಾವಣೆ 2013 ರಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಮತ್ತು ಜಿಲ್ಲಾ ನಗರ ವಿನ್ಯಾಸ ಪ್ರಾಧಿಕಾರದಿಂದ ಅನುಮೋದನೆ ಪಡೆದಿದ್ದರೂ ಕೂಡಾ ಅಭಿವೃದ್ಧಿ ಕಾಣದೇ ಹಿಂದುಳಿದಿದೆ. ಇನ್ನೂ ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಆಕಾಶ ಪಾರ್ಕ್ ಕಡೆ ಗಮನ ಹರಿಸಿ ಸ್ಥಳೀಯರಿಗೆ ಅನುಕೂಲ ಮಾಡಬೇಕೆಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Kshetra Samachara
08/10/2021 08:05 pm