ನವಲಗುಂದ : ಅದೆಷ್ಟೋ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಾಗಿ ಶಾಲೆಯ ಸ್ವಂತ ಕ್ರೀಡಾಂಗಣ ಇಲ್ಲದಿರುವಂತಹ ಬೆಕ್ಕಾದಷ್ಟು ಉದಾಹರಣೆಗಳನ್ನು ನಾವು ನೋಡಿರುತ್ತೇವೆ. ಆದರೆ ಈಗ ನೀವು ನೋಡುತ್ತಿರುವ ಕ್ರೀಡಾಂಗಣ ಇಷ್ಟು ವಿಶಾಲವಾಗಿದ್ದರೂ ಸಹ ಸರಿಯಾದ ನಿರ್ವಹಣೆ ಇಲ್ಲದೆ, ಪುಂಡರ ಅಡ್ಡೆಯಂತಾಗಿ ಹೋಗಿದೆ.
ಇದು ಯಾವುದೋ ಕುಗ್ರಾಮದಲ್ಲಿರುವ ಶಾಲೆಯ ಕ್ರೀಡಾಂಗಣ ಅಲ್ಲಾ, ಇದು ನವಲಗುಂದ ಪಟ್ಟಣದಲ್ಲಿರುವ ಮಾಡೆಲ್ ಹೈಸ್ಕೂಲ್ ನ ಕ್ರೀಡಾಂಗಣ, ಇಲ್ಲಿ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಚಟುವಟಿಕೆಗಳನ್ನು ಮಾಡುವುದಕ್ಕಿಂತ ಹೆಚ್ಚಾಗಿ, ಪುಂಡರು ಮದ್ಯ ಸೇವಿಸಲು ಉಪಯೋಗಿಸಲಾಗುತ್ತಿದ್ದೆ ಎಂದರು ತಪ್ಪಿಲ್ಲಾ, ಇದಕ್ಕೆ ಒಳ್ಳೆಯ ಉದಾಹರಣೆ ಅಂದ್ರೆ ಇಲ್ಲಿ ಕಾಣಸಿಗುವ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, ಅಷ್ಟೇ ಅಲ್ಲದೇ ಕ್ರೀಡಾಂಗಣ ಸಂಪೂರ್ಣ ಜಾಲಿ ಗಿಡಗಳಿಂದ ಕೂಡಿದೆ. ಇನ್ನು ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕೇಳಿದ್ರೆ ಮಾತನಾಡಲು ನಿರಾಕರಿಸಿದರು. ಹೋಗಲಿ ಆಡಳಿತ ಮಂಡಳಿಯವರಿಗೆ ಸಂಪರ್ಕಿಸುವ ದೂರವಾಣಿ ಸಂಖ್ಯೆ ಕೇಳಿದರೂ ಮುಖ್ಯೋಪಾಧ್ಯಾಯರು ನೀಡಲಿಲ್ಲ. ಏನೇ ಇರಲಿ ಈಗಾಗಲೇ ಶಾಲೆಗಳು ಸಹ ಆರಂಭವಾಗಿವೆ. ಇನ್ನಾದರೂ ಇಷ್ಟು ದೊಡ್ಡ ಕ್ರೀಡಾಂಗಣವನ್ನು ಸರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗೆ ಅನುವು ಮಾಡಿಕೊಡಬೇಕಿದೆ.
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
26/09/2021 03:21 pm