ಕಲಘಟಗಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಧಾರವಾಡ ವಾಯ್ಹಾ ಮುತ್ತಗಿ ಮಾರ್ಗದ ಬಸ್ ಬರದೇ ವಿದ್ಯಾರ್ಥಿಗಳು ಪರದಾಡಿದ ಘಟನೆ ಜರುಗಿದ್ದು ಆಕ್ರೋಶಗೊಂಡ ಜನರು ಹೆದ್ದಾರಿ ತಡೆದು ಗುರುವಾರ ಪ್ರತಿಭಟನೆ ಮಾಡಿದರು.
ವಾಯ್ಹಾ ಮುತ್ತಗಿ ಮಾರ್ಗದ ಬಸ್ ಬಿಡುವಂತೆ ಭಾನುವಾರ ಹುಲ್ಲಂಬಿ ಗ್ರಾಮದಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿದಾಗ ಡಿಪೋ ಅಧಿಕಾರಿಗಳು ಬಸ್ ನಿಗದಿತವಾಗಿ ಬಿಡುವ ಭರವಸೆ ನೀಡಿದ್ದರು.ಆದರೆ ಇಂದು ಮಧ್ಯಹ್ನದಿಂದ ಸಂಜೆಯವರೆಗೂ ಯಾವುದೇ ಬಸ್ ವ್ಯವಸ್ಥೆ ಇಲ್ಲದೇ ಮುತ್ತಗಿ,ಗಂಭ್ಯಾಪೂರ,ಹುಲ್ಲಂಬಿ ಹಾಗೂ ಧಾರವಾಡಕ್ಕೆ ತೆರಳುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪರದಾಡಿದರು.
ಇದರಿಂದ ರೋಸಿ ಹೋದ ಜನರು ಕಾರವಾರ ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.ಒಟ್ಟಾರೆ ಡಿಪೋ ಇದ್ದರು ಬಸ್ ಸಮಸ್ಯೆ ಪರಿಹಾರ ಕಾಣದೇ ಇರವುದು ವಿಪರ್ಯಾಸವೆ ಸರಿ.
Kshetra Samachara
23/09/2021 08:52 pm