ನವಲಗುಂದ : ಕಳೆದ ಹಲವು ವರ್ಷಗಳಿಂದ ಶಿರೂರ ಗ್ರಾಮಸ್ಥರಿಗೆ ಯಮನೂರ ಮಾರ್ಗವಾಗಿ ಶಿರೂರು ಇದ್ದ ಬಸ್ ವ್ಯವಸ್ಥೆಯ ಬೇಡಿಕೆ ಇಂದಿಗೆ ಪೂರ್ಣಗೊಂಡಿದ್ದು, ಬುಧವಾರ ಬೆಳಿಗ್ಗೆ ಶಿರೂರ ಗ್ರಾಮಕ್ಕೆ ಆಗಮಿಸಿದ ಬಸ್ ಗೆ ಗ್ರಾಮಸ್ಥರಿಂದ ಪೂಜೆ ನೆರವೇರಿಸಲಾಯಿತು.
ಹೌದು ಇಂದಿನಿಂದ ನವಲಗುಂದ, ಯಮನೂರ, ತಿರ್ಲಾಪುರ, ಮೊರಬ, ಗುಮ್ಮಾಗೋಳ ಮಾರ್ಗವಾಗಿ ಶಿರೂರು ಬಸ್ ಸಂಚಾರ ಆರಂಭವಾದ ಹಿನ್ನೆಲೆ ಗ್ರಾಮಸ್ಥರು ಬಸ್ ಅನ್ನು ಮಧುವಣಗಿತ್ತಿಯಂತೆ ಶೃಂಗರಿಸಿ, ಪೂಜೆ ಸಲ್ಲಿಸಿದರು. ಇನ್ನು ತಮ್ಮ ಬೇಡಿಕೆಯನ್ನು ಈಡೇರಿಸಿದ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಶಿರೂರು ಗ್ರಾಮಸ್ಥರು ಕೃತಜ್ಞತೆ ತಿಳಿಸಿದರು.
Kshetra Samachara
22/09/2021 01:43 pm