ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಕ ರಾಷ್ಟ್ರಕ್ಕೆ ಬೇಕಾದ ಅರ್ಹ ವ್ಯಕ್ತಿ ರೂಪಿಸಬಲ್ಲ - ಅಶೋಕ್ ಶಿಗ್ಗಾಂವಿ

ಕುಂದಗೋಳ : ಶಿಕ್ಷಕ ವೃತ್ತಿ ಎಂಬುದು ಕೇವಲ ಕಲಿಸುವುದಷ್ಟೇ ಅಲ್ಲಾ ಕಲಿಯುವುದು ಕೂಡಾ ಮಕ್ಕಳಲ್ಲಿ ಮಕ್ಕಳಾಗಿ ಬೇರೆಯುವ ಗುಣ ಶ್ರೇಷ್ಠವಾದದು ಎಂದು ಅಭಿನವ ಕಲ್ಯಾಣಪುರ ಬಸವಣ್ಣನವರು ಹೇಳಿದರು.

ಅವರು ಕುಂದಗೋಳ ಪಟ್ಟಣದ ಜೆ.ಎಸ್.ಎಸ್ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಾತನಾಡಿ ತಮ್ಮ ಜನ್ಮದಿನವನ್ನು ಎಲ್ಲ ಶಿಕ್ಷಕ ವರ್ಗದ ಜನ್ಮ ದಿನಾಚರಣೆಯನ್ನಾಗಿ ಆಚರಿಸುವಂತೆ ಕರೆ ನೀಡಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪು ಅಜರಾಮರ ಎಂದರು.

ಬಳಿಕ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಮಾತನಾಡಿ ವೃತ್ತಿಯಲ್ಲೇ ಶ್ರೇಷ್ಠ ವೃತ್ತಿ ಎಂದರೇ ಶಿಕ್ಷಕ ವೃತ್ತಿ ಶಿಕ್ಷಕ ಸಮಾಜಕ್ಕೆ ಬೇಕಾದ ಅರ್ಹ ವ್ಯಕ್ತಿ ರೂಪಿಸಬಲ್ಲ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಠಪತಿ ಮಾತನಾಡಿ ಶಿಕ್ಷಕರ ಸೇವೆ ಬಗ್ಗೆ ತಿಳಿಸಿದರು. ವಿವಿಧ ಕಲಾ ತಂಡಗಳಿಂದ ಜಾನಪದ ಸಂಗೀತ ನೇರವೇರಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ, ಉಪಾಧ್ಯಕ್ಷೇ ಭುವನೇಶ್ವರಿ ಕೇವಲಗೇರಿ, ಹಾಗೂ ಕುಂದಗೋಳ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಶಿಕ್ಷಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

09/09/2021 01:35 pm

Cinque Terre

10.11 K

Cinque Terre

0

ಸಂಬಂಧಿತ ಸುದ್ದಿ