ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್;ಕೈಗೆ ಬಂದ 18 ತಿಂಗಳ ಮಾಸಾಶನ

ನವಲಗುಂದ : ಕಳೆದ ಮೂರು ವರ್ಷಗಳಿಂದ 18 ತಿಂಗಳ ವಿಕಲಚೇತನ ಮಾಸಾಶನ ಸಿಗದೇ ಪರದಾಟ ನಡೆಸಿದ ನವಲಗುಂದದ ಜಮಖಾನ ಓಣಿಯ ಗಂಗಾಧರ ನರಸಿಂಗಪ್ಪ ಬೇಂದ್ರೆ ಅವರಿಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮಾಸಾಶನ ನೀಡಿದ್ದಾರೆ.

ತಮ್ಮ ದ್ವಿಚಕ್ರ ವಾಹನದಿಂದ ಕೆಳಗಿಳಿದು ನಿಲ್ಲಲೂ ಸಹ ಆಗದ ವಿಕಲಚೇತನರಾದ ಗಂಗಾಧರ ನರಸಿಂಗಪ್ಪ ಬೇಂದ್ರೆ ಅವರಿಗೆ 18 ತಿಂಗಳ ಮಾಸಾಶನ ತಲುಪದೆ ಕಚೇರಿಗಳಿಗೆ ತಿರುಗುವ ದುಸ್ಥಿತಿ ಬಂದೋದಗಿತ್ತು. ಆದರೆ ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳೆದ ತಿಂಗಳು ವರದಿಯನ್ನು ಬಿತ್ತರಿಸಿತ್ತು. ಅಷ್ಟೇ ಅಲ್ಲದೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈಗ ಬಾಕಿ ಇದ್ದ 18 ತಿಂಗಳ ವಿಕಲಚೇತನ ಮಾಸಾಶನವನ್ನು ಗಂಗಾಧರ ನರಸಿಂಗಪ್ಪ ಬೇಂದ್ರೆ ಅವರಿಗೆ ತಲುಪಿಸಿದ್ದು, ಗಂಗಾಧರ ನರಸಿಂಗಪ್ಪ ಬೇಂದ್ರೆ ಅವರು ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದಗಳನ್ನು ತಿಳಿಸಿದರು.

ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

08/09/2021 02:50 pm

Cinque Terre

25.43 K

Cinque Terre

1

ಸಂಬಂಧಿತ ಸುದ್ದಿ