ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಶಿಬಿರದ ಅಂಗವಾಗಿ ಏರ್ಪಡಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಸುಮಾ ಹಿರೇಮಠ ಮಕ್ಕಳಿಗೆ ಹಾಗೂ ಗರ್ಭಿಣಿಯರು ಒಳ್ಳೆ ಆಹಾರವನ್ನು ಸೇವಿಸಬೇಕು ಎಂದು ಹೇಳಿದರು. ಇದೇ ವೇಳೆ ಲಕ್ಷ್ಮವ್ವ ಪಿಡಿ ಮಾತನಾಡಿ ಮಕ್ಕಳಿಗೆ ದಿನ ನಿತ್ಯ ಶೇಂಗಾ ಕಾಳನ್ನು ನೆನೆಸಿ ತಿನ್ನಿಸುವುದು ಒಳ್ಳೆಯದು ಶೇಂಗಾ ಬಡವರ ಬಾದಾಮಿ ಇದ್ದಂತೆ ಅದನ್ನು ತಿನ್ನುವುದು ಸೂಕ್ತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಸಲಹಾ ಸಮಿತಿ ಸದಸ್ಯ ಬಸವರಾಜ ಯೋಗಪ್ಪನವರ, ನಿಂಗವ್ವ , ಮಾಬೂಬಿ ನದಾಫ್, ಶೋಭಾ ಯೋಗಪ್ಪನವರ, ನಾಗರತ್ನ ದಾನನ್ನವರ, ಯಲ್ಲವ್ವ ಹುಲಿಕಟ್ಟಿ, ಜಯವ್ವ ಸಿದ್ದನ್ನವರ, ದ್ಯಾಮವ್ವ ಕೇರಿ, ಅಕ್ಕಮ್ಮ ಸಿದ್ದನ್ನವರ, ನಿಂಗವ್ವ ಅಮಾತಿ, ಅಕ್ಕಮ್ಮ ಕಂಬಳಿ ಹಾಗೂ ಗರ್ಭಿಣಿಯರು ಕಿಶೋರಿಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
Kshetra Samachara
08/09/2021 01:15 pm