ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದ ಮಧ್ಯೆ ಸಂಚರಿಸುತ್ತಿರುವ ಬೇಂದ್ರೆ ನಗರ ಸಾರಿಗೆ ಬಸ್ಸುಗಳನ್ನು ಯಾವುದೇ ಕಾರಣಕ್ಕೂ ಬಂದ್ ಮಾಡದಂತೆ ಆಗ್ರಹಿಸಿ ನವಲೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನವಲೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಬೇಂದ್ರೆ ಬಸ್ಸುಗಳು ಹುಬ್ಬಳ್ಳಿ, ಧಾರವಾಡ ಜನತೆಗೆ ಒಳ್ಳೆಯ ಸೇವೆ ಒದಗಿಸುತ್ತಿವೆ. ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಪಾಸ್ ಕೂಡ ವಿತರಣೆ ಮಾಡಿ ನಿಗದಿತ ಸಮಯದಲ್ಲಿ ಒಳ್ಳೆಯ ಸೇವೆ ನೀಡುತ್ತಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಬೇಂದ್ರೆ ನಗರ ಸಾರಿಗೆ ಬಸ್ಸುಗಳನ್ನು ಬಂದ್ ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.
Kshetra Samachara
11/08/2021 11:45 am