ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅಪಾಯಕ್ಕೆ ಆಹ್ವಾನ ನೀಡುವ ಟಿಸಿ ಸ್ಥಳಾಂತರಿಸಿ

ಕಲಘಟಗಿ: ಪಟ್ಟಣದ ಗಾಂಧಿನಗರ ಹತ್ತಿರವಿರುವ ಜಿಲ್ಲಾ ಮುಖ್ಯ ರಸ್ತೆಗೆ ಹೊಂದಿಕೊಂಡು ಅಳ್ವಡಿಸಿರುವ ವಿದ್ಯುತ್ ಟಿಸಿ ಅಪಾಯಕ್ಕೆ ಆಹ್ವಾನ‌ನೀಡುವಂತೆ ಇದ್ದು,ಅದನ್ನು ಸ್ಥಳಾಂತರಿಸುವಂತೆ ಇಲ್ಲಿನ‌ ನಿವಾಸಿಗಳು ಆಗ್ರಹಿಸಿದ್ದಾರೆ.

ಟಿಸಿಯಿಂದ ರಸ್ತೆಯಲ್ಲಿ ವಾಹನಗಳು,ಕಬ್ಬು ತುಂಬಿದ ಲಾರಿಗಳು ಎದರಾಗಿ ಬಂದರೆ ಟಿಸಿಯ ವಿದ್ಯುತ್ ತಂತಿ ವಾಹನಗಳಿಗೆ ತಗುಲುವ ಸಾಧ್ಯತೆ ಇದೆ.ಇದೇ ರಸ್ತೆಯಲ್ಲಿ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಚರಿಸುವುದರಿಂದ ಟಿಸಿ ಸ್ಥಳಾಂತರದ ಅಗತ್ಯವಿದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಿದರು ಸಮಸ್ಯೆಗೆ ಪರಿಹಾಯ ಸಿಕ್ಕಿಲ್ಲ.

ಟಿಸಿ ಇರುವ ಸ್ಥಳದಲ್ಲಿ ಜನದಟ್ಟಣೆ,ವಾಹನ ದಟ್ಟಣೆ ಹೆಚ್ಚಾಗಿದೆ.ಅಪಾಯದ ಸಾಧ್ಯತೆ ಇದ್ದು, ಸುರಕ್ಷತೆಯ ಕಾರಣ ಟಿಸಿ ಸ್ಥಳಾಂತರಿಸುವಂತೆ ಸೋಮಶೇಖರ ದೇಸಾಯಿ ಆಗ್ರಹಿಸಿದ್ದಾರೆ.ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಟಿಸಿ ಸ್ಥಳಾಂತರಿಸಿ ಇಲ್ಲಿನ‌ ಜನರಿಗೆ ಅನುಕೂಲ ಕಲ್ಪಿಸ ಬೇಕಿದೆ.

Edited By : Shivu K
Kshetra Samachara

Kshetra Samachara

07/08/2021 09:18 am

Cinque Terre

36.4 K

Cinque Terre

0

ಸಂಬಂಧಿತ ಸುದ್ದಿ