ಕುಂದಗೋಳ : ಪಟ್ಟಣದ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ, ಆರೋಗ್ಯ ನಿರೀಕ್ಷಕರೇ, ಕುಂದಗೋಳ ತಾಲೂಕ ಆಸ್ಪತ್ರೆ ಆರೋಗ್ಯ ಶಿಕ್ಷಣಾಧಿಕಾರಿಗಳೇ ಎಲ್ಲರಿಗೂ ನಮಸ್ಕಾರ, ಕೊರೊನಾ ಎರಡನೇ ಅಲೆ ಸಾಂಕ್ರಾಮಿಕ ರೋಗದ ಬಗ್ಗೆ ನಿಮ್ಮ ತಿಳುವಳಿಕೆ ನಮಗೆ ಬೇಡಾ ಡ್ರಮ್, ನೀರಿನ್ ಟ್ಯಾಂಕ್ ಒಳಗಿನ ನೀರು ಸೊಳ್ಳೆ ಚೆಕ್ ಮಾಡುವ ಬದಲಾಗಿ ಈ ಚರಂಡಿ ಚೆಕ್ ಮಾಡ್ರೀ.
ಇದೇನ್ರೀ, ಎಂಥಾ ಮಾತು ಅಂತಿರೇನು ? ಈ ಮಾತುಗಳನ್ನು ನಾವ್ ಹೇಳ್ತಾ ಇಲ್ಲಾ, ಕುಂದಗೋಳ ಪಟ್ಟಣದ ವಾರ್ಡ್ ನಂಬರ್ 3 ಮಾನಪ್ಪನ ಪ್ಲಾಟ್ ನಿವಾಸಿಗಳು ಹೇಳಾಕತ್ತಾರ ಏನದು ನೀವೇ ಕೇಳ್ರಿ.
ಇವ್ರ ಇಷ್ಟೇಲ್ಲಾ ಹೇಳಿದ್ದು ಯಾವ್ ವಿಚಾರಕ್ಕ ಅಂತಿರೇನು ? ಮಾನಪ್ಪನ ಪ್ಲಾಟ್ ಒಳಗೆ ಸ್ತ್ರೀ ಏಳ್ಗೆಗಾಗಿ ಕಟ್ಟಿದ ಸ್ತ್ರೀ ಶಕ್ತಿ ಭವನ, ಶುದ್ಧ ಕುಡಿಯುವ ನೀರಿನ ಘಟಕ, ಆಮ್ಯಾಗ ನಿತ್ಯ ಬಳಕೆಯ ನೀರಿನ ತೊಟ್ಟಿ ಹಿಂದೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂಗ್ರಹವಾದ ತ್ಯಾಜ್ಯ ಕಸ, ಹಂದಿಗಳ ಕಾಟ, ರೋಗದ ಭೀತಿ ಬಗ್ಗೆ ಇಲ್ಲಿನ ನಿವಾಸಿಗಳು ಬೇಸತ್ತು ಈ ಮಾತ್ ಹೇಳ್ಯಾರ.
ಅಲ್ರೀ ಅಧಿಕಾರಿಗಳೇ ಕೊರೊನಾ ಬಗ್ಗೆ ಅಷ್ಟೇಲ್ಲಾ ಜಾಗೃತಿ ಮೂಡಿಸಿರೋ ನೀವೂಗಳು ಈ ಮಾನಪ್ಪನ ಶುದ್ಧ ನೀರಿನ ಘಟಕ ಹಿಂದೆ ಸಂಗ್ರಹವಾಗೋ ಕಸ ವಿಲೇವಾರಿ ಮತ್ತು ಕೊಳಚೆ ನೀರು ರಾಡಿ ತುಂಬಿದ ಈ ಪ್ರದೇಶಕ್ಕೆ ಮುಕ್ತಿ ಕೊಡೋದು ಯಾವಾಗ ? ಇಲ್ಲಿನ ಜನರಿಗೆ ತಮ್ಮ ಮಕ್ಕಳ ಜಾಗೃತೆ ಜೊತೆ ಎಲ್ಲಿ ಗಬ್ಬು ವಾಸನೆ ಸೊಳ್ಳೆ ಕಡಿತಕ್ಕೆ ರೋಗಕ್ಕೆ ಬಲಿಯಾಗ್ತಿವೋ ? ಅನ್ನೋ ಭಯ ಕಾಡ್ತಾ ಇದೆಯಂಥ ಮತ್ತ್ ಎರೆಡು ನಿಮಿಷ ಮನಿ ಮುಂದ್ ಕುಂದರಾಕ್ ಆಗಲಾರದಷ್ಟು ವಾಸನಿ ಐತಿ ಅಂಥ ನೀವೋಮ್ಮೆ ಪರೀಕ್ಷೆ ಮಾಡಿ ಪರಿಹಾರ ಕೊಡ್ರಲ್ಲಾ.
ನೋಡ್ರಿ ಅಧಿಕಾರಿಗಳೇ ಜನಪ್ರತಿನಿಧಿಗಳೇ ಇಲ್ಲಿರುವ ಸಮಸ್ಯೆಯನ್ನು ಅಲ್ಲಿನ ನಿವಾಸಿಗಳು ಕೆರೆಗೆ ಓಗೊಟ್ಟು ನಾವ್ ಹೋಗಿ ಸುದ್ಧಿ ಮಾಡೇವಿ ,ಈ ಬಗ್ಗೆ ಸೂಕ್ತ ಕ್ರಮ ತಗೋರ್ರಿಪಾ.
ಶ್ರೀಧರ ಪೂಜಾರ,
ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
31/07/2021 06:04 pm