ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹಗಲೂ ಆರದ ವಿದ್ಯುತ್ ಕಂಬದ ದೀಪ, ನಿರ್ಲಕ್ಷದಲ್ಲಿ ತೇಲ್ತಾ ಇದ್ದಾರೆ ಅಧಿಕಾರಿಗಳು

ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

ನವಲಗುಂದ : ಸೂರ್ಯ ನೆತ್ತಿಯ ಮೇಲೆ ಬಂದ್ರು ಸಹ ವಿದ್ಯುತ್ ಕಂಬದ ದೀಪಗಳು ಉರಿತಾನೆ ಇವೆ, ಈ ದೃಶ್ಯಗಳು ಎಲ್ಲರಿಗೂ ಕಾಣ್ತಾ ಇವೆ ಆದ್ರೆ ಪುರಸಭೆ ಅಧಿಕಾರಿಗಳಿಗೆ ಮಾತ್ರ ಕಾಣ್ತಾ ಇಲ್ವಲ್ರಿ...

ಹೌದು ರಾತ್ರಿನೂ ಉರಿಯೋದೆ ಹಗಲಿನೂ ಉರಿಯೋದೆ, ಇದು ಅಧಿಕಾರಿಗಳಿಗೆ ತಿಳಿದಿದೆಯೋ ಇಲ್ವೋ ಗೊತ್ತಿಲ್ಲಾ, ತಿಳಿದಿಲ್ಲಾ ಅಂದ್ರೂ ತಿಳಿದುಕೊಂಡು ಸರಿಯಾದ ನಿರ್ವಹಣೆಗೆ ಮುಂದಾಗಬೇಕಿತ್ತು, ಆದರೆ ತಮಗೆ ಸಂಬಂಧವೇ ಇಲ್ಲಾ ಅನ್ನೋ ಹಾಗೇ ಪುರಸಭೆ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ನೀಲಮ್ಮನ ಮುಖ್ಯ ದ್ವಾರದಿಂದ ಅಣ್ಣಿಗೇರಿ ಕಡೆಗೆ ಹೋಗುವ ರಸ್ತೆಯ ಮಧ್ಯ ಉದ್ದಕ್ಕೂ ಇರುವ ಈ ವಿದ್ಯುತ್ ಕಂಬಗಳು ಕಳೆದ ಎರಡಮೂರು ದಿನಗಳಿಂದ ಹೀಗೆ ಉರಿತಾನೆ ಇವೆ. ಇದರ ಬಗ್ಗೆ ಯಾಕೆ ಇಷ್ಟೊಂದು ನಿಷ್ಕಾಳಜಿ ಅನ್ನೋದು ತಿಳಿತಾ ಇಲ್ಲಾ, ಕೂಡಲೇ ಸರಿಯಾದ ನಿರ್ವಹಣೆಯತ್ತ ನವಲಗುಂದ ಪುರಸಭೆ ಅಧಿಕಾರಿಗಳು ಗಮನ ಹರಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

27/02/2021 04:00 pm

Cinque Terre

41.39 K

Cinque Terre

3

ಸಂಬಂಧಿತ ಸುದ್ದಿ