This is a modal window.
Beginning of dialog window. Escape will cancel and close the window.
End of dialog window.
ಶಲವಡಿ: ಎಲ್ಲಾ ಮಾಯ ನಾಳೆ ನಾವು ಮಾಯ. ಈ ಹಾಡ್ನಾ ಕೇಳಿರಿಲ್ವಾ.. ಕೇಳಿರಲೇ ಬೇಕು. ಇಟ್ಟ ವಸ್ತು ಮಾಯ ಆತು ಅಂತ ಅಂದ್ರ ಈ ಹಾಡ ನೆನಪ ಆಕೈತಿ. ನಮ್ಮ ಮನ್ಯಾಗಿನ ಒಂದು ಚರಗಿ ಮಿಸ್ ಆದ್ರ ಸಾಕ ಅಂಗಳಾದ ನಿಂತ ಕಂಟ್ಲ ಹರಿಯೋವಂಗ ಬೈತೇವಿ. ಆದ್ರ ಪಂಚಾಯ್ತಿಗೆ ಸಂಬಂಧಿಸಿದ ವಸ್ತುಗಳು ಅಂದ್ರ 'ದಾದ್ ನಹೀ, ಪಿರಾದ್ ನಹೀ' ಅನ್ನೋವಂಗ ಆಗೈತಿ ನೋಡ್ರಿ ಪಾ ಮತ್ತ...
ಇದು ಎಲ್ಲಿದೋ ಕಥೆಯಲ್ಲ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಪರಿಸ್ಥಿತಿ ಆಗೈತಿ. ಹೌದ್ರಿ ಮತ್ತ ದೇಶದ ಯುವಕರು ಸದೃಢವಾಗ್ಲಿ, ಆರ್ಮಿ, ಪೊಲೀಸ್ ಆಯ್ಕೆಗೆ ಸಿದ್ಧತೆ ನಡೆಸಿರೋ ಹುಡ್ರಿಗೆ ಅನುಕೂಲ ಆಗ್ಲಿ ಅಂತ ಜಿಮ್ ವ್ಯವಸ್ಥೆ ಆಯ್ತು. ಶಾಸಕರ ಅನುದಾನದಾಗ ಶಲವಡಿ ಗ್ರಾಮಕ್ಕೆ ಸಿಕ್ಕ ಭಾಗ್ಯ ಕೆಲವೇ ತಿಂಗ್ಳಲ್ಲಿ ಮಾಯ ಆಗೈತಿ.
ಜಿಮ್ ಆರಂಭಿಸಿದ್ದ ಕೊಠಡಿ ಸುತ್ತ ಈಗ ಮುಳ್ಳುಕಂಟಿ ಬೆಳದೈತಿ. ಇನ್ನ ಜಿಮ್ ಒಳಗ ಒಂದೇ ಒಂದ್ ಮಟಿರಿಯಲ್ ಅನಾಥವಾಗಿ ಬಿದೈತಿ. ಉಳಿದಿದ್ದು ಎಲ್ಲಿ ಹ್ವಾದ್ವು ಅಂತ ಕೇಳಬ್ಯಾಡ್ರಿ. ಕೇಳಿದ್ರಿ ಅಂದ್ರ ಅದಕ್ಕೆ ನೂರೆಂಟ ಉತ್ತರ ಹುಟ್ತವು... ಅವ್ರು ಜವಾಬ್ದಾರಿ ತಗೊಂಡಿದ್ರು, ಇವ್ರು ಜವಾಬ್ದಾರಿ ತಗೊಂಡಿದ್ರು... ಅನ್ನೊ ಅಂತೆ ಕಂತೆ ಮಾತು ಬಿಟ್ರೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಕಷ್ಟ ಆಗೈತಿ... ಹಿಂಗಾದ್ರ ಹೆಂಗ್ರಿ...?
ಸೀದಾ ಪಂಚಾಯಿಗೆ ಬಂದ್ಯಾ,, ಇರೋ ಬರೋ ಡಾಕ್ಯುಮೆಂಟ್ ನೋಡ್ದೆ, ಸಹಿ ಮಾಡ್ದೆ,, ಹೋದ್ಯಾ ಅನ್ನೋ ರೊಟೀನ್ ಕೆಲಸ ಮಾಡೋದು ಸ್ವಲ್ಪ ಸೈಡಿಗೆ ಇಟ್ಟು ಊರಾಗ ಹೋಗಿ ಸಮಸ್ಯೆ ಆಲಿಸ್ರಿಪಾ.. ಇನ್ನಾರ ಜವಾಬ್ದಾರಿ ಅರಿತ ಊರು ಉದ್ದಾರ ಮಾಡ್ರಪಾ.. ಗ್ರಾಮಕ್ಕೆ ಬಂದಿರೋ ಸವಲತ್ತುಗಳ ಬಗ್ಗೆ ಕೊಂಚ ಕಾಳಜಿ ತೋರಸ್ರಿ...
Kshetra Samachara
22/02/2021 03:23 pm