ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಗುಂಡಿ ಇದೆ ಎಚ್ಚರಿಕೆ, ಅಪಘಾತಕ್ಕೆ ಆಹ್ವಾನಿಸುತ್ತಿರುವ ಕಳಪೆ ಕಾಮಗಾರಿ

ಅಣ್ಣಿಗೇರಿ : ಪಟ್ಟಣದ ಮಧ್ಯಭಾಗದಲ್ಲಿ ಹಾಯ್ದು ಹೋಗಿರುವ ಗದಗ-ನವಲಗುಂದ ರಸ್ತೆಯ ಸುರಕೋಡ ಜಿನ್ನಿಂಗ್ ಫ್ಯಾಕ್ಟರಿ ಮುಂಭಾಗದಲ್ಲಿ ಕಳಪೆ ಕಾಮಗಾರಿಯಿಂದ ಕೂಡಿ ರಸ್ತೆ ಹಾಳಾಗಿದ್ದರೂ ಕೂಡಾ ಸಂಬಂಧಿಸಿದ ಅಧಿಕಾರಿಗಳು ಕ್ಯಾರೆ ಎನ್ನದಿರುವದು ದುರದೃಷ್ಟವಕಾಶ ಎಂದು ಸ್ಥಳೀಯರು ಆರೋಪಿಸುತ್ತಾದ್ದಾರೆ.

ಹೌದು... ಕೇಂದ್ರ ಸರ್ಕಾರದ ಸಿಆರ್ ಎಫ್‌ ಯೋಜನೆಯಲ್ಲಿ ಸುಮಾರು 5 ಕೋಟಿ ಅನುದಾನದಲ್ಲಿ ನಿರ್ಮಾಣವಾಗಬೇಕಿದ್ದ ದ್ವಿಪಥ ರಸ್ತೆ ನೆನೆಗುದಿಗೆ ಬಿದ್ದು ಮೂರು ವರ್ಷ ಕಳೆದರೂ ಕೂಡಾ ಸಂಭಂದಿಸಿದ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ರಸ್ತೆಗಳು ಹಾಳಾಗಿದ್ದರಿಂದ ಸಾಕಷ್ಟು ಅಪಘಾತಗಳು ಸಂಭವಿಸಿ ಕೆಲವರ ಜೀವವು ಕೂಡಾ ಹಾರಿಹೋಗಿದೆ. ರಸ್ತೆಯ ಮಧ್ಯಭಾಗದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕಳೆದ ವಾರ ಗುತ್ತಿಗೆದಾರ ಮಾನವೀಯತೆಯಿಂದ ಅಲ್ಪಸ್ವಲ್ಪ ಪ್ರಮಾಣದ ಕಾಮಗಾರಿಯನ್ನು ಕೈಗೊಂಡು ಇಲ್ಲಿಂದ ಜಾರಿಗೊಂಡಿದ್ದಾನೆ.

ಕಳೆದ ವಾರ ಮುಚ್ಚಿದ ತಗ್ಗು ಗುಂಡಿಗಳು ಮತ್ತೆ ಇಂದು ಅಪಘಾತಕ್ಕೆ ಕೈ ಬಿಸಿ ಕರೆಯುತ್ತಿವೆ. ಇನ್ನು ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಸುಧಾರಣೆ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿ ಕೊಡುತ್ತದೆ ಎಂದು ಕಾಯ್ದು ನೋಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.

Edited By : Manjunath H D
Kshetra Samachara

Kshetra Samachara

21/02/2021 09:12 pm

Cinque Terre

34.77 K

Cinque Terre

1

ಸಂಬಂಧಿತ ಸುದ್ದಿ