ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸಚಿವರ ಮೊರೆ ಹೋದ ಗ್ರಾಮಸ್ಥರು

ಕುಂದಗೋಳ : ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗುಡೇನಕಟ್ಟಿಯಿಂದ ಅಲ್ಲಾಪುರ ಕಡಪಟ್ಟಿ ರಸ್ತೆ ಡಾಂಬರೀಕರಣ ಮಾಡಿ ರಸ್ತೆ ನಡುವಿನ ಹಳ್ಳಗಳಿಗೆ ಸೇತುವೆ ನಿರ್ಮಾಣ ಮಾಡುವಂತೆ ಗುಡೇನಕಟ್ಟಿ ಕಡಪಟ್ಟಿ ಗ್ರಾಮಸ್ಥರು ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಮನವಿ ಸಲ್ಲಿಸಿದರು.

ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೆ ಕಡಪಟ್ಟಿ ಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಕೃಷಿ ಚಟುವಟಿಕೆ ಸೇರಿದಂತೆ ವಾಹನಗ‌ಳ ಸಂಚಾರಕ್ಕೆ ತೊಂದರೆಯಾಗಿದೆ ಶೀಘ್ರವೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಎಂದರು.

ಈ ಸಂದರ್ಭದಲ್ಲಿ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಸೊರಟೂರ ರೈತ ಮುಖಂಡ ಬಸವರಾಜ ಯೋಗಪ್ಪನವರ ಹಾಗೂ ಪಂಚಾಯಿತಿ ಸರ್ವ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

21/02/2021 12:22 pm

Cinque Terre

10.38 K

Cinque Terre

0

ಸಂಬಂಧಿತ ಸುದ್ದಿ