ಕುಂದಗೋಳ : ಮಳೆಗಾಲ ಕಳೆದು ಬೇಸಿಗೆ ಆರಂಭವಾಗಿದೆ ಮತ್ತೆ ಮಳೆಗಾಲ ಆರಂಭದ ಒಳಗಾಗಿ ನಮ್ಮೂರ ರಸ್ತೆ ಮಾಡಿಸಿಕೊಡಿ. ಬಿದ್ದಿರುವ ಬ್ರೀಡ್ಜ್ ನಿರ್ಮಿಸಿ ಎಂಬ ಇಂಗಳಗಿ ಬು.ತರ್ಲಘಟ್ಟ ಗ್ರಾಮದ ಜನರ ಅಳಲಿಗೆ ಸ್ಪಂದನೆ ದೊರೆಯದಾಗಿದೆ.
ಯಾಕಪ್ಪಾ ಅಂದ್ರಾ ? ಇಲ್ನೋಡಿ ಈ ಪಾಟಿ ರಸ್ತೆಯೋ ಕೆರೆಯೋ ಎಂಬುದನ್ನು ಅಂದಾಜಿಸದ ಮಟ್ಟಿಗೆ ಹಾಳಾದ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಸಾರ್ವಜನಿಕ ಪರಿಸ್ಥಿತಿ ಏನಾಗಬೇಡ ?
ಈ ಬಗ್ಗೆ ರೈತರು ಮಳೆಗಾಲ ಆರಂಭಕ್ಕೂ ಮೊದಲೇ ರಸ್ತೆ ನಿರ್ಮಿಸಿ ಬ್ರಿಡ್ಜ್ ಕಟ್ಟಿಸಿ ಎಂದ್ರು ಅವರ ಮಾತಿಗೆ ಈ ಅಧಿಕಾರಿಗಳು ಕಿವಿಗೊಡುತ್ತಿಲ್ಲಾ.
ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಗೆ ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದ್ರೆ, ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದೇವೆ ಕೆಲಸ ಆಗುತ್ತೆ ಅಂತಾರೇ. ಆದ್ರೆ ಯಾವಾಗ ಆಗುತ್ತೆ ? ಎಂಬುದು ಸ್ಪಷ್ಟವಾಗಿ ಹೇಳುತ್ತಲಿಲ್ಲ.
ಇಂತಹ ಹಾಳಾದ ರಸ್ತೆಯಲ್ಲಿ ನಿತ್ಯ ಕೃಷಿ ಚಟುವಟಿಕೆ ಸೇರಿದಂತೆ ವಾಹನಗಳ ಸಂಚಾರಕ್ಕೆ ಎಲ್ಲಿಲ್ಲದ ತಾಪತ್ರಯ ಪಡುತ್ತಿರೋ ಜನರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಪ ಹಾಕುತ್ತಲಿದ್ದು ಮಳೆಗಾಲಕ್ಕೂ ಮೊದಲು ರಸ್ತೆ ಸರಿಪಡಿಸಿ ಎನ್ನುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರ ಟೆಂಡರ್ ಪ್ರಕ್ರಿಯೆ ಮುಕ್ತಾಯ ಮಾಡಿ ಬ್ರಿಡ್ಜ್ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂಬುದು ಪಬ್ಲಿಕ್ ನೆಕ್ಷ್ಟ ಆಶಯ.
Kshetra Samachara
20/02/2021 03:09 pm