ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಾಲುವೆಗೆ ತಡೆಗೋಡೆ ಇಲ್ಲ ಜೋಪಾನ: ಯಮಲೋಕಕ್ಕೆ ಕೊಡುತ್ತಿದೆ ಆಹ್ವಾನ

ನವಲಗುಂದ : ಇದು ಮೇಲ್ಮಟ್ಟದ ಮಲಪ್ರಭಾ ಕಾಲುವೆ. ಇರೋದು ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಬಳಿ. ಇಷ್ಟು ಸುಸಜ್ಜಿತವಾಗಿ ಮತ್ತು ಸ್ವಚ್ಛಂದವಾಗಿ ಕಾಣುವ ಈ ಕಾಲುವೆ ಈಗ ಜೀವ ಬಲಿ ಪಡೆಯಲು ಕಾದು ಕುಳಿತಂತೆ ಭಾಸವಾಗುತ್ತಿದೆ. ಇದಕ್ಕೆಲ್ಲಾ ಕಾರಣ ಈ ದೊಡ್ಡ ಕಾಲುವೆಗೆ ತಡೆಗೋಡೆ ಇಲ್ಲದೇ ಇರೋದು.

ಹೌದು...ಈ ಮೇಲ್ಮಟ್ಟದ ಮಲಪ್ರಭಾ ಕಾಲುವೆಯಲ್ಲಿ ಬಿದ್ದು ಅದೆಷ್ಟೋ ಜನ ಕೊನೆಯುಸಿರೆಳೆದಿದ್ದಾರೆ. ಅಂತದ್ರಲ್ಲಿ ಇಲ್ಲಿ ಸಂಚರಿಸುವ ಜನರಾಗಿರಬಹುದು ಅಥವಾ ರೈತರಾಗಿರಬಹುದು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಈಗ ಬಂದು ಬಿಟ್ಟಿದೆ. ಇದಕ್ಕೆ ಸಂಬಂಧ ಪಟ್ಟ ನೀರಾವರಿ ಇಲಾಖೆಗೆ ಇಲ್ಲಿ ಇಂತಹ ಪರಿಸ್ಥಿತಿ ಇರೋದು ತಿಳಿದೇ ಇಲ್ಲಾ ಅಂತಾ ಕಾಣುತ್ತೆ. ಅದೇನೇ ಇರಲಿ ಮೊದಲು ಈ ಕಾಲುವೆಯ ಈ ಚಿಕ್ಕ ಸೇತುವೆಗೆ ತಡೆಗೋಡೆ ನಿರ್ಮಿಸಿ, ರೈತರಿಗೆ ನಿಶ್ಚಿಂತೆಯಿಂದ ಇರಲು ಅನುವುಮಾಡಿ ಕೊಡಬೇಕಿದೆ.

Edited By : Manjunath H D
Kshetra Samachara

Kshetra Samachara

11/02/2021 05:22 pm

Cinque Terre

43.86 K

Cinque Terre

0

ಸಂಬಂಧಿತ ಸುದ್ದಿ