ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಸಂಶಿ ಶಿರೂರು ನಡುವಿನ ರೈಲ್ವೆ ಬ್ರೀಡ್ಜ್ ಒಂದೇಡೆ ಭಾಗ ಬಿದ್ದ ಪರಿಣಾಮ ನಿತ್ಯ ಸಂಚಾರಿ ವಾಹನ ಸವಾರರಲ್ಲಿ ಭಯದ ವಾತಾವರಣ ಉಂಟಾಗಿದೆ.
ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಸಂಶಿ ರೈಲ್ವೆ ಟ್ರ್ಯಾಕ್ ಬಳಿಯ ಬ್ರಿಡ್ಜ್ ಪಕ್ಕದ ಸಿಮೇಂಟ್ ಪ್ಲೇಟ್'ಗಳು ಕುಸಿದು ನೆಲಕ್ಕುರುಳಿದ್ದು ವಾಹನ ಸಂಚಾರದ ವೇಳೆ ಬ್ರಿಡ್ಜ್ ಒಳಗಿಂದ ಮಣ್ಣು ಬೀಳುತ್ತಿದೆ.
ಈ ಪರಿಣಾಮ ಬ್ರೀಡ್ಜ್ ಪಕ್ಕದಲ್ಲಿ ಸುಳಿಯಲು ಸಾರ್ವಜನಿಕರಿಗೆ ಭಯವಾದ್ರೇ, ಬ್ರಿಡ್ಜ್ ಮೇಲೆ ಸಂಚರಿಸುವ ವಾಹನ ಸವಾರಿಗೆ ಅಪಾಯದ ಭೀತಿ ತಲೆದೋರಿದೆ. ಈ ಹಿಂದೆ ಕೆ.ಆರ್.ಡಿ.ಸಿ.ಎಲ್ ಕಂಪನಿ ನಿರ್ಮಿಸಿದ ಈ ಬ್ರೀಡ್ಜ್ ಅವರು ಅವಧಿಯಿಂದ ಮುಕ್ತವಾಗಿ ಸದ್ಯ ಲೋಕೋಪಯೋಗಿ ಇಲಾಖೆ ತೆಕ್ಕೆಯಲ್ಲಿದೆ.
ಈ ಬ್ರೀಡ್ಜ್ ಸಮಸ್ಯೆ ಕುರಿತು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸಂಪರ್ಕ ಮಾಡಿದ್ರೇ ಸಾರ್, ಬ್ರೀಡ್ಜ್ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸ್ಪೇಷಲ್ ಇಂಜಿನೀಯರ್ಸ್ ಕರೆಸಿ ಅಲ್ಲಿನ ಸ್ಥಿತಿ ಅವಲೋಕಿಸಿದ್ದೇವೆ, ಆ ರೀತಿ ಮುಂದೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.
ಆದ್ರೆ ಸಾರ್ವಜನಿಕರು ಹೇಳೋ ಪೈಕಿ ಶೀಘ್ರದಲ್ಲೇ ಬ್ರೀಡ್ಜ್ ಸಮಸ್ಯೆಗೆ ಕ್ರಮ ಜಾರಿಗೊಳಿಸದಿದ್ದರೇ ಯಾವಾಗ ? ಏನು ? ಅನಾಹುತ ಉಂಟಾಗುತ್ತೆ ಗೊತ್ತಿಲ್ಲಾ ಅಂತಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಬ್ರೀಡ್ಜ್ ದುರಸ್ತಿಗೆ ಶೀಘ್ರವೇ ಕ್ರಮ ರೂಪಿಸಿ ಅಪಾಯ ಮಾರ್ಗ ತಪ್ಪಿಸಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
02/02/2021 10:08 pm