ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಮ್ಮ ಜಾಗವನ್ನು ನಮಗೆ ನೀಡುವವರೆಗೂ ನಮ್ಮ ನಿರಂತರ ಹೋರಾಟ

ಹುಬ್ಬಳ್ಳಿ: ನಗರದ ಸುಡಗಾಡ ಚಾಳ, ವಲ್ಲಭಬಾಯಿ ನಗರದಲ್ಲಿ ಮಾದಿಗ ಜನಾಂಗದ ಗುಡಿಸಲುಗಳನ್ನು, ರೇಲ್ವೆ ಇಲಾಖೆಯವರು 2006 ರಲ್ಲಿ ದೌರ್ಜನ್ಯದಿಂದ ತೆರವುಗೊಳಿಸಿರುವ ಹಾಗೂ ರಾಜ್ಯ ಸರಕಾರದಿಂದ ಯಾವುದೇ ರೀತಿಯ ಪರಿಹಾರ, ಪುನರ್ವಸತಿ ಕಲ್ಪಿಸುವಂತೆ ಶಿವಶರಣ ಮಾದರ ಚನ್ನಯ್ಯ ಸೇವಾ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಸರ್ಕಲ್ ದಿಂದ ತಹಶೀಲ್ದಾರ ಕಚೇರಿ ವರೆಗೆ ರ‌್ಯಾಲಿಯನ್ನು ಮಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಇಲ್ಲಿ ಮಾದಿಗ ಜನಾಂಗದ ಸುಮಾರು 150 ಕುಟುಂಬಗಳು 100 ವರ್ಷಗಳಿಂದ ಸುಡಗಾಡ ಚಾಳ, ವಲ್ಲಭಬಾಯಿ ನಗರದಲ್ಲಿ ಮಲಹೊರುವ ಮತ್ತು ತೆರದ ಚರಂಡಿಗಳನ್ನು ಸ್ವಚ್ಛಗೊಳಿಸುತ್ತ ಇಲ್ಲಿ ಗುಡಿಸಲಗಳನ್ನು ನಿರ್ಮಿಸಿಕೊಂಡು ವಾಸಿಸುತ್ತ ಬಂದಿದ್ದರು. ಮತ್ತು ಕಾಲಕಳೆದಂತ ಸ್ಥಳೀಯ ಆಡಳಿತವು ಸಹ ಈ ಗುಡಿಸಲುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತ ಬಂದಿತ್ತು. ಅಷ್ಟೇ ಅಲ್ಲದೆ ವಾಸಿಸುತ್ತಿದ್ದ ಇಲ್ಲಿಯ ಜನರು ಸಹ ಸ್ಥಳಿಯ ಆಡಳಿತಕ್ಕೆ ಕರವನ್ನು ತುಂಬುತ್ತಿದ್ದರು. ಆದರೂ ಕೂಡ 2006 ರಲ್ಲಿ ಇಲ್ಲಿನ ನಿವಾಸಿಗಳನ್ನು ಸುಮಾರು ಅತಿ ಅಮಾನುಷವಾಗಿ ದೌರ್ಜನ್ಯದಿಂದ ತೆರವು ಗೊಳಿಸಿದರು. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಮಾದಿಗ ಜನಾಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಪರಿಹಾರ ಮತ್ತು ಪುನರ್ವಸತಿಯನ್ನು ಆದಷ್ಟು ಬೇಗ ಕಲ್ಪಿಸಿಕೊಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೌರ್ಜ್ಯನ್ಯಕ್ಕೊಳಗಾದ ಎಲ್ಲಾ 150 ಕುಟುಂಬಗಳು ನಿರಂತರವಾಗಿ ಧರಣಿ ಸತ್ಯಗ್ರಹ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

01/02/2021 01:30 pm

Cinque Terre

23.93 K

Cinque Terre

1

ಸಂಬಂಧಿತ ಸುದ್ದಿ