ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ಮಾರ್ಗವಾಗಿ ಸಂಧಿಸುವ ಕುಂದಗೋಳ ತಾಲೂಕಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ಪಟ್ಟಣ ಸಂಪರ್ಕಿಸಿ ಕಾಲೇಜು ಸೇರಲು ಸೂಕ್ತ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲಾ ಎಂದು ಈ ಹಿಂದೆ ಸಂಶಿ ಹಾಗೂ ಶಿರೂರು ಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದರು.
ಈ ವಿಚಾರವಾಗಿ ಶಾಸಕಿ ಕುಸುಮಾವತಿ ಶಿವಳ್ಳಿ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸಾರಿಗೆ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಈ ಮೊದಲಿನಂತೆ ಹುಬ್ಬಳ್ಳಿ ಲಕ್ಷ್ಮೇಶ್ವರ ಮಾರ್ಗವಾಗಿ ಹೆಚ್ಚುವರಿ ನಾಲ್ಕು ಸಾರಿಗೆ ಬಸ್ಸಿನ ಸೇವೆ ಒದಗಿಸುವಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ಈ ಹಿಂದೆ ವಿಧ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೇವೆ ಇಲ್ಲದೆ ಪ್ರತಿಭಟನೆ ಕೈಗೊಂಡ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬಸ್ಸಿಗಾಗಿ ವಿದ್ಯಾರ್ಥಿಗಳ ಹರಸಾಹಸ ಕಾರ್ಯಾಚರಣೆ ಹೆಚ್ಚಿಸದ ಸಾರಿಗೆ ಸಂಸ್ಥೆ ಎಂಬ ಶಿರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿ ಸ್ಥಳೀಯ ವಿದ್ಯಾರ್ಥಿಗಳ ಸಮಸ್ಯೆ ಬಿತ್ತರಿಸಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
ಈ ವರದಿ ಪ್ರಕಟಗೊಂಡ ಬಳಿಕ ಶಾಸಕಿ ಕುಸುಮಾವತಿ ಸಾರಿಗೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ತಿಳಿಗೊಳಿಸಿದ್ದಾರೆ.
Kshetra Samachara
27/01/2021 12:59 pm