ಕಲಘಟಗಿ:ಪಟ್ಟಣದ ಗುಡ್ ನ್ಯೂಜ್ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು 2 ಯುವ ರೆಡ್ ಕ್ರಾಸ್ ಘಟಕ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಯಿತು.
ಸಿಪಿಐ ಪ್ರಭು ಸುರೇನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ,ಯುವಕರು ಸಂಚಾರಿ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಯುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕಿವಿ ಮಾತನ್ನು ಹೇಳಿದರು.
ಆಡಳಿತಾಧಿಕಾರಿ ರೇ. ಬ್ರ. ನಿಜು ಥಾಮಸ ಅಧ್ಯಕ್ಷತೆವಹಿಸಿದ್ದರು.ಪ್ರಾಚಾರ್ಯರಾದ ಡಾ. ಬಿ.ಜಿ. ಬಿರಾದಾರ,ಎಂ.ಎಸ್. ಮುರಗೋಡಮಠ,ಡಾ.ಮಹೇಶ ಹೊರಕೇರಿ,ಜಾಕೀಯಾ ಸೌದಾಗರ,ಶಾಂತಲಾ ನಾಯಕ,ಅನಿತಾ ಭಟ,ಎಂ.ಪಿ. ಹಿರೇಮಠ,ವ್ಹಿ. ಆರ್. ಬೆಟಗಾರ,ಮಹಾದೇವ ಉಳ್ಳಾಗಡ್ಡಿ ಉಪಸ್ಥಿತರಿದ್ದರು.
Kshetra Samachara
22/01/2021 01:33 pm