ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
ಅಣ್ಣಿಗೇರಿ: ತಾಲೂಕಿನ ಭದ್ರಾಪೂರ ಗ್ರಾಮದ ಯೋಧ ಲಕ್ಷ್ಮಣ ಪಡೇಸೂರ ಎಂಬುವರು ಕಳೆದ 2016ರಲ್ಲಿ ರಜೆಗೆಂದು ಗ್ರಾಮಕ್ಕೆ ಬಂದಾಗ ಹೃದಯಾಘವಾಗಿ ಮರಣ ಹೊಂದಿದ್ದರು.
ಅಂದು ತಾಲೂಕಾಡಳಿತ ಹಾಗೂ ಭದ್ರಾಪೂರ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಯೋಧನ ಪಾರ್ಥಿವ ಶರೀರವನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿ ನಂತರ ಗ್ರಾಮದ ಯುವಕ ಮಂಡಳವೊಂದರ ಜಾಗದ ಗಟಾರ ದಂಡೆ ಮೇಲೆ ಅಂತ್ಯಕ್ರಿಯೆ ಮಾಡಿ ಕೈತೊಳೆದುಕೊಂಡಿತ್ತು.
ತದನಂತರ ಅಂತ್ಯಕ್ರಿಯೆ ಮಾಡಿದ ನಂತರ ಸ್ಥಳೀಯ ಆಡಳಿತವಾಗಲಿ ಹಾಗೂ ಜಿಲ್ಲಾಡಳಿತವಾಗಲಿ ಯೋಧನ ಸಮಾಧಿಗೆ ರಕ್ಷಣೆ ನೀಡುವಲ್ಲಿ ಮೀನಾಮೇಷ ಮಾಡಿ ಯೋಧನಿಗೆ ಅಗೌರವ ತೋರುತ್ತಿದ್ದಾರೆ ಮತ್ತು ಸಮಾಧಿ ಮೇಲೆ ಸರಾಯಿ ಪ್ಯಾಕೆಟ್ ಗಳು ಹಾಗೂ ಮೂಕ ಪ್ರಾಣಿಗಳು ಮಲಮೂತ್ರ ಮಾಡುತ್ತಿವೆ ಎಂದು ಪಬ್ಲಿಕ್ ನೆಕ್ಸ್ಟ್ ಭಾನುವಾರ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೆ
ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಹಾಗೂ ಸಿಬ್ಬಂದಿಗಳು ಎಚ್ಛೆತ್ತುಕೊಂಡು ಮಂಗಳವಾರ ಬೆಳ್ಳಂ ಬೆಳಿಗ್ಗೆ ಯೋಧನ ಸಮಾಧಿ ಸ್ಥಳವನ್ನು ಸ್ವಚ್ಛಗೊಳಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಮುಂದಾದರು ನೂತನ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದಲ್ಲಿ ಯೋಧನ ಸಮಾಧಿ ನಿರ್ಮಿಸುವಲ್ಲಿ ಮುಂದಾಗುತ್ತಾರೊ ಇಲ್ಲವೋ ಕಾದು ನೋಡೊನಾ...
Kshetra Samachara
19/01/2021 05:47 pm