ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಟಿತ ಉದ್ಯಾನವನ.ಆ ಉದ್ಯಾನವನದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗಾಗಿ ಆಟವಾಡಲು ಪುಟಾಣಿ ರೈಲು ನಿರ್ಮಾಣ ಮಾಡಲಾಗಿದೆ.ಆದ್ರೇ ಆ ರೈಲಿನ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಬೇಸರ ಮೂಡಿಸುತ್ತ.ಹಾಗಿದ್ದರೇ ಯಾವುದು ಆ ಉದ್ಯಾನವನ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ವಾಣಿಜ್ಯನಗರಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಮಕ್ಕಳ ಮನರಂಜನೆಗಾಗಿ ಪುಟಾಣಿ ರೈಲು ಸ್ಥಾಪನೆ ಮಾಡಲಾಗಿದೆ. ಆದ್ರೇ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿದೆ.ಹೌದು ಮಕ್ಕಳಿಗೆ ರೈಲಿನ ಅನುಭವ ನೀಡುವ ಮೂಲಕ ಮನರಂಜನೆಗಾಗಿ ನಿರ್ಮಾಣ ಮಾಡಿರುವ ಪುಟಾಣಿ ರೈಲು ಅವ್ಯವಸ್ಥೆ ಆಗರವಾಗಿದೆ.ಸೀಟ್ ಹರಿದು ಹೋಗಿದ್ದು,ಸಂಪೂರ್ಣ ತುಕ್ಕು ಹಿಡಿಯುವ ಸ್ಥಿತಿಯಲ್ಲಿದ್ದರೂ ಕೂಡ ಯಾವುದೇ ರೀತಿ ಕಾಳಜಿ ಮಾಡದೇ ಕಣ್ಣು ಮುಚ್ಚಿ ಕುಳಿತಿರುವುದು ಆಡೋಣ ಬಾ ಕೆಡಿಸೋಣ ಬಾ ಎಂಬಂತಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಉದ್ಯಾನವನ ಬಾಗಿಲು ಹಾಕಲಾಗಿತ್ತು.ಆದ್ರೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತದಾಗಿದೆ.ದುಡ್ಡು ಏನೋ ಖರ್ಚು ಮಾಡ್ತಾರೆ ನಿಜ ಆದ್ರೇ ನಿರ್ವಹಣೆ ಕೊರತೆಯಿಂದ ಹಾಳಾಗಿ ಹೋಗುತ್ತಿದ್ದು,ಖರ್ಚು ಮಾಡಿದ ಹಣ ಅನಾವಶ್ಯಕವಾಗಿ ಪೋಲ್ ಆಗಿ ಹೋಗುತ್ತಿದೆ.ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಗಳು ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.
Kshetra Samachara
19/01/2021 11:03 am