ಕುಂದಗೋಳ : ತಾಲೂಕಿನ ಜನರ ಬಹು ದಿನಗಳ ಬೇಡಿಕೆಯಾದ ಮಸಾರಿ ಪ್ಲಾಟ್ ಬಳಿಯ ರೈಲ್ವೆ ಬ್ರಿಡ್ಜ್ ಕಾಮಗಾರಿ ಪ್ರಾರಂಭದ ಜನರಿಗೆ ಖುಷಿ ಜನರಿಗೆ ತಲುಪುವ ಮೊದಲೇ ಸರ್ಕಾರಿ ಇಲಾಖೆಯೊಂದು ಸಾರ್ವಜನಿಕರಿಗೆ ಮತ್ತಷ್ಟು ದೂರವಾಗಿದೆ.
ಹೌದು ! ಕುಂದಗೋಳ ತಾಲೂಕಿನ ಹಳ್ಳಿಗಳಿಗೆ ನಿತ್ಯ ಬೆಳಗಾದ್ರೇ ಸೇವೆ ನೀಡುವ ಅಂಚೇ ಕಚೇರಿಯನ್ನು ಸೇರಲು ಜನ ಒಂದು ಕಿ.ಮೀ ದಾರಿ ಹೆಚ್ಚಿಗೆ ಹೆಚ್ಚು ಕ್ರಮಿಸುವ ಅನಿವಾರ್ಯತೆ ಎದುರಾಗಿದೆ.
ಈ ಹಿಂದಿನಿಂದಲೂ ಕುಂದಗೋಳ ಎಪಿಎಂಸಿ ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂಚೇ ಕಚೇರಿಯನ್ನ ಸಾರ್ವಜನಿಕರು ತಹಶೀಲ್ದಾರ ರಸ್ತೆ ಮೂಲಕ ಹಾದು ನೇರವಾಗಿ ಅಂಚೇ ಕಚೇರಿಯನ್ನ ತಲುಪುತ್ತಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಮಸಾರಿ ಪ್ಲಾಟ್ ಬಳಿ ರೈಲ್ವೆ ಕಾಮಗಾರಿ ನಡೆದಿರುವುದರಿಂದ ಜನರು ಬಸ್ ನಿಲ್ದಾಣದಿಂದ ಅಲ್ಲಾಪುರ ರಸ್ತೆ ಸೇರಿ ಅಲ್ಲಿಂದ ರೈಲ್ವೆ ಟ್ರ್ಯಾಕ್ ಬಳಿ ಕಚ್ಚಾ ದಾರಿ ಹಿಡಿದು ಅಂಚೇ ಕಚೇರಿಯನ್ನ ತಲುಪುತ್ತಿದ್ದು ಪಾದಾಚಾರಿಗಳು ವಯೋ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಇದು ಗೋಳಾಗಿದೆ. ಈ ಬಗ್ಗೆ ಸಾರ್ವಜನಿಕರು ಏನು ಹೇಳ್ತಾರೆ ಕೇಳಿ.
ಈಗಾಗಲೇ ಮಳೆ ಬಂದರೇ ಸೋರುವ ಮತ್ತು ಶೀಥಿಲಗೊಂಡ ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಚೇ ಕಚೇರಿಯನ್ನು ಈ ಕಾರಣದಿಂದಾದರೂ ಪಟ್ಟಣದ ಒಳಗಡೆ ವರ್ಗಾಯಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಜನರು ಒತ್ತಾಯಿಸಿದ್ದಾರೆ.
Kshetra Samachara
15/01/2021 06:37 pm