ನವಲಗುಂದ : ರಸ್ತೆ ಸಂಪೂರ್ಣ ಹದಗೆಟ್ರೆ ಸಾರ್ವಜನಿಕರು ಮತ್ತು ವಾಹನ ಸವಾರರು ಜಾಗೃತರಾಗಿ ಸಂಚಾರ ನಡೆಸುತ್ತಾರೆ. ಆದ್ರೆ ಈ ರೀತಿ ಚನ್ನಾಗಿರುವ ರಸ್ತೆಯಲ್ಲೇ ರಸ್ತೆಗೆ ಹಾಕಿರುವ ರಾಡ್ ಗಳು ಹೊರ ಬಂದ್ರೆ ಹೇಗೆ ಅನ್ನೋದು ಸ್ಥಳೀಯರ ಆತಂಕವಾಗಿದೆ.
ನವಲಗುಂದ ಪಟ್ಟಣದ ಕುರಹಟ್ಟಿ ಪ್ಲಾಟ್ ನ ರಸ್ತೆ ದುರಾವಸ್ಥೆ ಇದು, ಸರಿಯಾದ ರಸ್ತೆ ಇದೆ ಅಂತಾ ಜನರು ನಿಟ್ಟುಸಿರು ಬಿಡಬೇಕೋ ಅಥವಾ ಈ ರೀತಿ ರಸ್ತೆಗಳ ಮಧ್ಯ ಕಾಣದಂತೆ ಅವಿತು ಕುಳಿತ ರಾಡ್ ಗಳಿಂದಾಗಿ ಆತಂಕ ಪಡಬೇಕೋ ತಿಳಿಯದಂತಾಗಿದೆ.
ಈ ರಸ್ತೆಯ ಕಳಪೆ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು, ಇದರಿಂದ ಯಾವುದೇ ಅವಘಡ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ಥಿಗೆ ಮುಂದಾಗಬೇಕಿದೆ.
Kshetra Samachara
13/01/2021 07:59 pm