ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಇಂದಿರಾ ಮಾಸ್ಟರ್ ಕಿಚನ್ ಬಂದ್! ಸಾರ್ವಜನಿಕರಲ್ಲಿ ಗೊಂದಲ

ಹುಬ್ಬಳ್ಳಿ- ಅದು ಅದೆಷ್ಟೋ ಬಡ ಜನರ ಹಸಿವು ನೀಗಿಸುವ ಒಂದು ಬಹು ದೊಡ್ಡ ಯೋಜನೆಯಾಗಿತ್ತು' ಕಡಿಮೆ ಹಣದಲ್ಲಿ ಹೊಟ್ಟೆ ತುಂಬ ಊಟಾ ಮಾಡಿಕೊಂಡು ಹೋಗುತ್ತಿದ್ದ ಜನರಿಗೆ, ಈಗಿನ ಸರಕಾರ ಶಾಕ್ ನೀಡದೇ, ಅಷ್ಟಕ್ಕೂ ಆ ಯೋಜನೆಯ ಪರಿಸ್ಥಿತಿ ಹೇಗಿದೆ ಅಂತರಲ್ಲಿ ತೋರಸ್ತೆವಿ ನೋಡಿ.....

ದಿ.ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ರಾಜ್ಯದಲ್ಲಿ ಅಂದಿನ ಸಿದ್ದ ರಾಮಯ್ಯ ಸರಕಾರ, ಬಡವರ ಹಸಿವು ನೀಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್ ಆರಂಭಸಿದ್ದರು, ಇನ್ನೂ ಯೋಜನೆಗೆ ಕೋಟಿ ಹಣ ವ್ಯಯ ಮಾಡಿದ ಅಂದಿನ ಸರಕಾರದ ಅವದಿ ಮುಗಿಯುತ್ತಿದ್ದಂತೆ, ಇಂದಿರಾ ಕ್ಯಾಂಟಿನ್ ಒಂದೊಂದಾಗಿ ಮುಚ್ಚಿಕೊಳ್ಳುವ ಹಂತಕ್ಕೆ ತಲುಪಿದ್ದು ದುರದೃಷ್ಟಕರ, ಇನ್ನೂ ಅವಳಿ ನಗರದ ಇಂದಿರಾ ಕ್ಯಾಂಟಿನ್‌ಗಳಿಗೆ ಆಹಾರ ಪೂರೈಸಲು ಕೇಶ್ವಾಪುರ ಬೆಂಗೇರಿಯಲ್ಲಿ ಮೂರು ವರ್ಷಗಳ ಹಿಂದೆ ಆರಂಭಿಸಿದ್ದ ಮಾಸ್ಟರ್ ಕಿಚನ್ 10 ತಿಂಗಳಿಂದ ಬಂದ್ ಆಗಿದೆ. ಕೆಲವೇ ದಿನಗಳಲ್ಲಿ ತಲೆಎತ್ತಿ ನಿಂತಿದ್ದ ಈ ಮಾಸ್ಟರ್ ಕಿಚನ್ ಕಟ್ಟಡ ಸದ್ಯ ನಿರುಪಯುಕ್ತ ವಾಗಿದ್ದು, ಸರಕಾರದ ಹಣ ಹೇಗೆ ವ್ಯಯವಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಅದಕ್ಕೆ ಪಾಲಿಕೆ ಅಧಿಕಾರಿಗಳು ಏನು ಹೇಳುತ್ತಾರೆ ಕೇಳಿ...

ಇನ್ನು ಬೆಂಗೇರಿಯ ಸಂತೆ ಮಾರುಕಟ್ಟೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ, ಮೈದಾನದಲ್ಲಿ ಅಲ್ಲಿನ ಕೆಲವರು ಭಾರಿ ವಿರೋಧದ ಮಧ್ಯೆ ಕಿಚನ್ ಕಟ್ಟಡ ನಿರ್ಮಿಸಲಾಗಿತ್ತು. ಇನ್ನೂ ಸರಕಾರದ ಆದೇಶದ ದಂತ ಟಿಫಿನ್ ಹಾಗೂ ಮಧ್ಯಾಹ್ನ , ಸಂಜೆ ಊಟಕ್ಕೆ ಬೇಕಾದ ಆಹಾರವನ್ನು ಈ ಕಿಚನ್‌ನಲ್ಲಿಯೇ ತಯಾರಿಸಿ ಅವಳಿ ನಗರದಲ್ಲಿರುವ ಇಂದಿರಾ ಕ್ಯಾಂಟಿನ್ ಪೂರೈಸಬೇಕು.

ಆದರೆ ಪದ್ಧತಿಯನ್ನು ಕೈ ಬಿಟು ಖಾಸಗಿಯಾಗಿ ಆಹಾರ ತಯಾರಿಸಿ ಪೂರೈಸುತ್ತಿರುವ ಉದ್ದೇಶ ಪಾಲಿಕೆಗೆ ತಿಳಿಯದಿರುವುದು ಅಚ್ಚರಿ ಮೂಡಿಸಿದೆ. ಮುಖ್ಯ ಅಡುಗೆ ಕೇಂದ್ರ ಬಂದ್ ಆಗಿದ್ದರಿಂದ ಊಟ ,ಉಪಹಾರ ಎಲ್ಲಿಂದ ಪೂರೈಸಲಾಗುತ್ತದೆ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ...

ಒಟ್ಟಿನಲ್ಲಿ ಬಡ ಜನರ ಹಸಿವು ನೀಗಿಸುವ ಉದ್ದೇಶ ಹೊಂದಿರುವ ಈ ಯೋಜನೆ ರಾಜಕೀಯ ಗೊಂದಲಕ್ಕೆ ಸಿಲುಕಿ ಮುಚ್ಚುವ ಹಂತಕ್ಕೆ ತಲುಪಿದ್ದ ವಿಪರ್ಯಾಸವೆ ಸರಿ.....!

Edited By : Nagesh Gaonkar
Kshetra Samachara

Kshetra Samachara

07/01/2021 09:35 pm

Cinque Terre

32.2 K

Cinque Terre

5

ಸಂಬಂಧಿತ ಸುದ್ದಿ