ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಡೆಗೋಡೆ ಇಲ್ಲದೆ ಸೇತುವೆ ಸಂಚಾರ ಪ್ರಾಣ ತೆಗೆದೀತು ಹುಷಾರ್ !

ಕುಂದಗೋಳ : ಬೆಣ್ಣೆ ಹಳ್ಳಕ್ಕೆ ಅಡ್ಡವಾಗಿ ಕಟ್ಟಿದ ಸುಸಜ್ಜಿತ ಸೇತುವೆಯಿಂದಲೇ ಎರಡೂರು ಗ್ರಾಮಸ್ಥರು ಭಯದಲ್ಲೇ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.

ಹೌದು ! ಕುಂದಗೋಳ ತಾಲೂಕಿನ ದೇವನೂರು ಮತ್ತು ಕಮಡೊಳ್ಳಿ ನಡುವೆ ಹಾದು ಹೋಗುವ ಬೆಣ್ಣೆ ಹಳ್ಳಕ್ಕೆ ಅಡ್ಡವಾಗಿ ಈ ಹಿಂದೆ ಸೇತುವೆ ಕಟ್ಟಲಾಗಿದೆ, ಆದ್ರೆ ಆ ಸೇತುವೆಗೆ ಸೂಕ್ತ ತಡೆಗೋಡೆ, ರಕ್ಷಣೆಗೆ ಕಬ್ಬಿಣ ಸಳಿಗಳು ಇಲ್ಲಾ ನೋಡಿ ಈ ಪರಿಣಾಮ ಸೇತುವೆ ಮೇಲೆ ರಾತ್ರಿ ವಾಹನ ಸಂಚರಿಸುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದ ಉದಾಹರಣೆಗೆ ಯಾರಿಂದಲೂ ಸೂಕ್ತ ಸ್ಪಂದನೆ ದೊರಕಿಲ್ಲ.

ಈಗಾಗಲೇ ನಿರ್ಮಿಸಿದ ಸೇತುವೆಗೆ ಅಳವಡಿಸಿದ್ದ ಕಬ್ಬಿಣ ಸಳಿಗಳು ಹಾಗೂ ಗೂಟ ಕಂಬಗಳು ಕಿತ್ತು ಹೋಗಿದ್ದು, ಅದರಲ್ಲಿ ಕಬ್ಬಿಣದ ಸುಳಿಗಳು ಎದ್ದು ಅಪಾಯ ಸೃಷ್ಟಿಸಲು ಬಾಯ್ತೆರೆದಿವೆ. ಈ ಬಗ್ಗೆ ಸ್ಥಳೀಯರನ್ನು ಕೇಳಿದ್ರೆ, ಈ ಸೇತುವೆ ಅವಸರದಲ್ಲಿ ಸಿಂಗಲ್ ಲೈನ್ ಕಟ್ಟಿದ್ದು ಅತಿ ಕಿರಿದಾಗಿದೆ. ದಯವಿಟ್ಟು ಸೇತುವೆ ಅಗಲ ಜಾಸ್ತಿ ಮಾಡಿ ತಡೆಗೋಡೆ ನಿರ್ಮಿಸಿ ಎನ್ನುತ್ತಿದ್ದಾರೆ.

ಬೈಟ್.1 ಪರಪ್ಪ

ದೇವನೂರು, ಗ್ರಾಮಸ್ಥರು

ಕೇಳಿದ್ರಲ್ಲಾ ಒಟ್ಟಾರೆ ಸಂಬಂಧಪಟ್ಟ ಇಲಾಖೆ ಗಮನಿಸಿ ಸೇತುವೆ ವಿಸ್ತರಣೆ ಮಾಡಿ ಅಡ್ಡವಾಗಿ ತಡೆಗೋಡೆ ನಿರ್ಮಿಸಿದ್ರೇ ರಾತ್ರಿ ಸಮಯ ಉಂಟಾಗುವ ಅಪಘಾತ ಪ್ರಾಣ ಹಾನಿ ತಪ್ಪಿಸಿದಂತಾಗುತ್ತದೆ.

Edited By : Nagesh Gaonkar
Kshetra Samachara

Kshetra Samachara

07/01/2021 08:05 pm

Cinque Terre

74.74 K

Cinque Terre

1

ಸಂಬಂಧಿತ ಸುದ್ದಿ