ಕುಂದಗೋಳ : ದೂರದ ಊರಿಂದ ಬಂದೆ ಸುಸ್ತಾಯ್ತು ಅಂತಾ ಕುಂದಗೋಳ ಬಸ್ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಗೆ ಕೂರಲು ಹೋದ್ರೆ,
ಅಯ್ಯೋ ಸ್ವಾಮಿ ನಮ್ಮೂರು ಬಸ್ ಬರೋದು ತಡವಾಗುತ್ತೆ ಎಂದು ಮಹಿಳಾ ವಿಶ್ರಾಂತಿ ಕೊಠಡಿ ಆಶ್ರಯಿಸಲೂ ಹೋದ್ರೆ ಅಲ್ಲಿರುವ ಅವ್ಯವಸ್ಥೆ ಈ ಮಹಿಳೆಯರನ್ನ ಹೊರ ನೂಕಿ ಬಿಡುತ್ತೆ ನೋಡಿ.
ಇದೋ ಕುಂದಗೋಳ ಪಟ್ಟಣದ ಗ್ರಾಮೀಣ ಬಸ್ ನಿಲ್ದಾಣದಲ್ಲಿ ಈ ಮಹಿಳೆಯರಿಗಾಗಿಯೇ ನಿರ್ಮಿಸಿದ ವಿಶ್ರಾಂತಿ ಕೊಠಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಡಿ.
ಯಾಕಪ್ಪಾ ಅಂದ್ರಾ ಇಲ್ನೋಡಿ, ಈ ಕೊಠಡಿ ತುಂಬಾ ಎಲ್ಲೇಂದರಲ್ಲಿ ಜೇಡರ ಬಲೆ ಕಸ ತುಂಬಿ, ಕಿಟಕಿ ಗ್ಲಾಸು ಒಡೆದು ಹೋಗಿವೆ, ಕೊಠಡಿಗೆ ಬಣ್ಣ ಬಳಿದು ಎಷ್ಟು ಶತಮಾನ ಗತಿಸಿದಿಯೋ ಏನೋ ಗೋಡೆ ಬಿರುಕು ಬಿಟ್ಟಿವೆ. ಇನ್ನು ಈ ಮಹಿಳಾ ಕೊಠಡಿಗೆ ಒಳಗೆ ಅದ್ಯಾರೋ ಉಗಳಿದ್ದಾರೋ ನೋಡಿ ಎಲೆ ಅಡಿಕೆ ಕಲೆ ಹಾಗೆ ಉಳಿದಿದೆ.
ಕೂರಲು ಇದ್ದ ಆಸನಗಳ ಮೇಲೆ ದೂಳು ಹೊಲಸು ತುಂಬಿ ಗಬ್ಬೆದ್ದು ಹೋದ್ರು ಅದಕ್ಕೆ ಪೂರಕೆ ತಾಗಿಲ್ಲ, ರಾತ್ರಿ ಸಮಯ ಮಹಿಳಾ ಕೊಠಡಿಗೆ ಬೆಳಕು ನೀಡೋ ವಿದ್ಯುತ್ ಮಾಯವಾಗಿದೆ.
ಇಷ್ಟೇಲ್ಲಾ ಅವ್ಯವಸ್ಥೆ ನಡುವೆ ಮಹಿಳೆಯರು, ಶಾಲಾ ಕಾಲೇಜುಗಳ ಮಕ್ಕಳು ಕೂರೋದಾದ್ರೋ ಹೇಗೆ ? ಈ ಬಗ್ಗೆ ಗಮನಿಸಬೇಕಾದ ಸಾರಿಗೆ ಸಂಸ್ಥೆ ಎಲ್ಲೋ ಮೌನವಾಗಿ ಉಳಿದಿದೆ. ಈ ಸಮಸ್ಯೆಗೆ ಅದ್ಯಾವಾಗ ಈ ಸಾರಿಗೆ ಅಧಿಕಾರಿಗಳು ಮುಕ್ತಿ ನೀಡ್ತಾರೋ ಕಾದು ನೋಡಬೇಕಿದೆ.
Kshetra Samachara
06/01/2021 08:30 pm