ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರದ್ದೇ ದರ್ಬಾರ್ ಎನ್ನುವಂತಾಗಿದೆ.
ಹೌದು. ನಿಲ್ದಾಣದಲ್ಲಿ ಬಸ್ ನಿಲ್ಲಿಸಿದರೆ ಸಾಕು ಆಟೋ ಚಾಲಕರು, ಇಲ್ಲಿ ನಮ್ಮ ಆಟೋ ನಿಂತಿದ್ದು ಕಾಣಲ್ವಾ? ಮುಂದೆ ಹೋಗು ಎಂದು ಪ್ರಯಾಣಿಕರು ಹತ್ತುತ್ತಿರುವಾಗಲೇ ಬಸ್ ಚಾಲಕರಿಗೆ ಅವಾಜ್ ಹಾಕುತ್ತಾರೆ. ಅವರ ವರ್ತನೆಯಿಂದ ಬಸ್ ಚಾಲಕರು ಬೇಸತ್ತು ಹೋಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಎಲ್ಲಾ ಆಟೋ ಚಾಲಕರು ಹೀಗೆ ವರ್ತಿಸುವುದಿಲ್ಲ. ಹೀಗಾಗಿ ಕಿಮ್ಸ್‌ನ ನಿರ್ದಿಷ್ಟ ಜಾಗದಲ್ಲಿ ಆಟೋಗಳು ನಿಂತರೆ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಜೊತೆಗೆ ಬಸ್ ಚಾಲಕರೊಂದಿಗೆ ವಾದಕ್ಕೆ ಇಳಿಯುವುದನ್ನು ತಪ್ಪಿಸಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Kshetra Samachara
05/01/2021 07:12 pm