ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪಟ್ಟಣದ ಪಡಿತರ ದಾಸ್ತಾನು ಕೇಂದ್ರ ಪರೀಶಿಲಿಸಿದ ಅಧಿಕಾರಿಗಳು

ಕುಂದಗೋಳ : ಆಹಾರ ನಾಗರೀಕ ಮತ್ತು ಸರಬರಾಜು ನಿಗಮದ ಮಂಡಳಿಯ ರಾಜ್ಯ ನಿರ್ದೇಶಕ ಜಯಪ್ರಕಾಶ್ ಶೆಟ್ಟಿ ಹಾಗೂ ಶರಣಬಸಪ್ಪ ಅಂಗಡಿಯವರು ಇತ್ತಿಚೆಗೆ ಪಟ್ಟಣದ ಟಿಎಪಿಎಂಸಿ ಆವರಣದಲ್ಲಿನ ಪಡಿತರ ಸಂಗ್ರಹದ ದಾಸ್ತಾನು ಕಟ್ಟಡ ಹಾಗೂ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ದಾಸ್ತಾನು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು ಪಡಿತರ ವಿತರಣೆಯ ಧಾನ್ಯ ಗುಣಮಟ್ಟದ ಜೊತೆ ದಾಸ್ತಾನು ಸಂಗ್ರಹದ ಮಳಿಗೆ ಸುಸುಜ್ಜಿತವಾಗಿರಬೇಕು, ಇದರಿಂದ ಆಹಾರಧಾನ್ಯ ಗುಣಮಟ್ಟ ಕಳೆದುಕೊಳ್ಳುವುದಿಲ್ಲ ಹಾಗೂ ಧಾನ್ಯ ಪೋಲಾಗುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಆಹಾರ ನಾಗರೀಕ ಸರಬರಾಜು ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕ ರವಿ ಹೊಸಮನಿ, ತಾಲೂಕು ಆಹಾರ ನಾಗರೀಕ ಸರಬರಾಜು ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ ಪಸರದ ಸೇರಿದಂತೆ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

04/01/2021 08:06 pm

Cinque Terre

15.38 K

Cinque Terre

4

ಸಂಬಂಧಿತ ಸುದ್ದಿ