ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯ ಉಣಕಲ್ ರೈಲ್ವೆ ನಿಲ್ದಾಣವು ಯಶವಂತಪುರ ಮಾದರಿಯ ರೈಲ್ವೆ ನಿಲ್ದಾಣವಾಗಿ ಅಭಿವೃದ್ಧಿಗೊಳ್ಳಲಿದ್ದು,ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಲಿದೆ.
ದೇಶಪಾಂಡೆ ನಗರ ಹಾಗೂ ಭವಾನಿ ನಗರ ಮಧ್ಯೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆಯನ್ನು ತಿಂಗಳಲ್ಲಿ, ಉಣಕಲ್ ರೈಲು ನಿಲ್ದಾಣದ ಬಳಿಯ ಕೆಳಸೇತುವೆಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ರೈಲ್ವೆ ಕೆಳಸೇತುವೆಗಳ ಕಾಮಗಾರಿ ವೀಕ್ಷಿಸಿದ ಅವರು, ದೇಶಪಾಂಡೆ ನಗರ ಬಳಿ ಸೇತುವೆಯನ್ನು ₹4.5 ಕೋಟಿ ವೆಚ್ಚದಲ್ಲಿ, ಉಣಕಲ್ ಸೇತುವೆಯನ್ನು ₹6.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಈ ಭಾಗದ ರೈಲ್ವೆ ಸುಧಾರಣೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಸ್ಪಂದಿಸಿದ್ದನ್ನು ಸ್ಮರಿಸಿ, ಉಣಕಲ್ ರೈಲು ನಿಲ್ದಾಣವನ್ನು ಬೆಂಗಳೂರಿನ ಯಶವಂತಪುರ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಹುಬ್ಬಳ್ಳಿ ರೈಲು ನಿಲ್ದಾಣದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅವಕಾಶಗಳಿವೆ.
ಕೈಗಾರಿಕೆ ನಿವೇಶನಗಳ ಹಂಚಿಕೆ ಪಾರದರ್ಶಕವಾಗಿ ನಡೆದಿದೆ ಎಂದರು. ಮಲ್ಲಿಕಾರ್ಜುನ ಸಾವಕಾರ, ತಿಪ್ಪಣ್ಣ ಮಜ್ಜಗಿ ಇದ್ದರು.
Kshetra Samachara
04/01/2021 11:21 am