ಧಾರವಾಡ: ಫುಟ್ ಪಾತ್ ಗಳಲ್ಲಿನ ಲೀಡ್ಕರ್ ಅಂಗಡಿಗಳನ್ನು ತೆರವುಗೊಳಿಸದಕ್ಕೆ ಚರ್ಮ ಕುಟೀರ ಅಂಗಡಿ ವ್ಯಾಪಾರಸ್ಥರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಸರ್ಕಾರವೇ ಹಿಂದುಳಿದ ವರ್ಗದ ದಲಿತ ಸಮುದಾಯಕ್ಕೆ ಈ ಅಂಗಡಿಗಳನ್ನು ಇಟ್ಟುಕೊಟ್ಟಿತ್ತು, ಆದರೆ ಮಹಾನಗರ ಪಾಲಿಕೆ ಯಾವುದೇ ರೀತಿಯ ಸೂಚನೆ ಸಹ ನೀಡದೆ ತೆರವುಗೊಳಿಸಿದ್ದು ಸದ್ಯ ಉಪಜೀವನಕ್ಕಿದ್ದ ಇದ್ದೊಂದು ಬದುಕು ಸಹ ಪಾಲಿಕೆ ಕಸಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈಗಾಗಲೇ ಜೀವನ ಸಾಗಿಸೋದು ಕಷ್ಟಕರವಾಗಿದ್ದು ಆದಷ್ಟು ಬೇಗ ನಮಗೆ ಕುಟೀರಗಳನ್ನು ನಿರ್ಮಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
Kshetra Samachara
02/01/2021 12:47 pm