ಕಲಘಟಗಿ : ತಮ್ಮೂರಿಗೆ 5 ವರ್ಷದ ಹಿಂದೆ ತಾತ್ಕಾಲಿಕವಾಗಿ ನಿರ್ಮಾಣವಾದ ರಸ್ತೆಯಿಂದ ಸಾರ್ವಜನಿಕ ಸಂಚಾರ ಸೇರಿ ಸುತ್ತಲಿನ ಮನೆಗಳ ಅಡಿಪಾಯಕ್ಕೆ ಕುತ್ತಾಗಿರುವ ರಸ್ತೆ ಸಮಸ್ಯೆ ತಿಳಿದು
ಸರಿಪಡಿಸಲು ಮುಂದಾದ ಲೋಕೋಪಯೋಗಿ ಇಲಾಖೆ ಇಂಜಿನೀಯರ್'ನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಪ್ರಶ್ನೇಗಳ ಸುರಿಮಳೆ ಗೈದಿದಾರೆ.
ಇಂತಹದೊಂದು ಘಟನೆ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ. ಏನಿದು ಕಥೆ ಅಂದ್ರಾ ? ಇಲ್ನೋಡಿ ಸ್ವಾಮಿ ಈ ಮಿಶ್ರಿಕೋಟಿ ಹಳೇ ಬಸ್ ನಿಲ್ದಾಣದ ರಸ್ತೆಯನ್ನು
5 ವರ್ಷದ ಹಿಂದೆ ತಾತ್ಕಾಲಿಕ ರಸ್ತೆ ಎಂದು ಜನರನ್ನು ನಂಬಿಸಿ ಅಂದು ರಸ್ತೆ ಮಾಡಿದ ಅಧಿಕಾರಿಗಳು ಮರಳಿ 5 ವರ್ಷ ಕಳೆದ ಮೇಲೆ ಅಧಿಕಾರಿಗಳು ಊರಿನ ಕಡೆ ತಲೆ ಹಾಕಿ ಮುಂದೆ ಕಾಂಕ್ರಿಟ್ ರಸ್ತೆ ಮಾಡ್ತಿವಿ ಎಂದಿದ್ದಾರೆ.
ಅಧಿಕಾರಿಗಳ ಈ ಮಾತಿಗೆ ಚಕಾರ ಎತ್ತಿದ ಗ್ರಾಮಸ್ಥರು. ಈ ರಸ್ತೆಗೆ ಹೊಂದಿಕೊಂಡಿರುವ ಮನೆಗಳ ತಗ್ಗು ಸೇರಿದ್ದು, ರಸ್ತೆ ಎತ್ತರದಲ್ಲಿದ್ದು ನೀರು ಹರಿದು ನೇರ ಮನೆಗಳ ಗೋಡೆಗೆ ತಾಗಿ ಅದೆಷ್ಟು ಮನೆಗಳು ಜವಳು ತಿಂದವೆ ನೋಡ್ರಿ ಎಂದು ಅಧಿಕಾರಿಗಳಿಗೆ ತೋರಿಸಿ.
ಮೊದಲು ರಸ್ತೆಗೆ ಸೂಕ್ತ ಚರಂಡಿ ಮಾಡ್ಸಿ ನಂತರ ರಸ್ತೆ ಮಾಡ್ಸಿ ಈಗ ಇಲ್ಲಿಂದ ಜಾಗ ಖಾಲಿ ಮಾಡಿ ಎಂದಿದ್ದಾರೆ.
ಇದಲ್ಲದೆ ಹಾಳಾದ ಮನೆಗಳಿಗೆ ಚರಂಡಿ ಸೌಲಭ್ಯ ನೀಡದೆ ನೇರ ರಸ್ತೆ ಅಭಿವೃದ್ಧಿ ಮಾಡಿದ್ರೇ ನಮ್ಮ ಗ್ರಾಮಕ್ಕೆ ರಸ್ತೆ ಬೇಡ್ವೆ ಬೇಡಾ ಎಂದು ಖಡಕ್ ವಾರ್ನಿಂಗ್ ಸಹ ಕೊಟ್ಟಿದ್ದಾರೆ.
Kshetra Samachara
26/12/2020 09:27 am