ವರದಿ : ಈರಣ್ಣ ವಾಲಿಕಾರ
ಹುಬ್ಬಳ್ಳಿ- ನಮ್ಮ ಹುಬ್ಳಿ ಧಾರವಾಡನ ಸ್ಮಾರ್ಟ್ ಸಿಟಿ ಮಾಡಲು, ನಮ್ಮ ಅಧಿಕಾರಿಗಳು ಯಾಕ ತಡಾ ಮಾಡ್ತಿದ್ದಾರೆ ಎಂಬುದ ಒಂದು ತಿಳಿವಲ್ದ ನೋಡ್ರೀ. ಬರೆ ಮುಖ್ಯ ರಸ್ತೆಗಳಿಗೆ ಮಾತ್ರ ಒತ್ತ ಕೊಡ್ತಿದ್ದಾರೆ. ಏನ ಅಂತ ಒಂದು ಅರ್ಥನಾ ಆಗ್ತಿಲ್ಲಾ ನೋಡ್ರಿ......
ನಮ್ಮ ಧಾರವಾಡ ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಮಾಡುದಕ್ಕ, ಸುಮಾರು 5 ರಿಂದ 6 ವರ್ಷ ಹರಸಾಹಸ ಮಾಡ್ತಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗ್ತಿಲ್ಲಾ ರೀ.. ಆದರೆ ಸ್ಮಾರ್ಟ್ ಸಿಟಿಗೆ ರೊಕ್ಕ ಮಾತ್ರ ಬರ್ತಾನ ಇದೇ, ಅದನ್ನ ಎಲ್ಲೆ ಹಾಕ್ತಾ ಇದಾರೆ ಎಂಬುದು ಒಂದು ತಿಳಿವಲ್ದ ನೋಡ್ರೀ. ಅಭಿವೃದ್ಧಿ ಮಾತ್ರ ಯಾವುದು ಆಗ್ತಿಲ್ಲಾ ಎಂದು ನಮ್ಮ ಹುಬ್ಬಳ್ಳಿ ಜನಾನೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆ ಎದ್ದಿದ್ದಾರೆ ರೀ.....
ಈ ಅಧಿಕಾರಿಗಳು ಹೆಂಗ ಅಂದ್ರ, ಸ್ಮಾರ್ಟ್ ಸಿಟಿ ಅಂದ್ರ ಕೇವಲ ಮುಖ್ಯ ರಸ್ತೆ ಸುಧಾರಣೆ ಮಾಡುದ ಅಷ್ಟ ಅಂತ ತಿಳ್ಕೊಂಡಾರೋ ಏನೊ, ಹುಬ್ಳಿ ಒಳಗಿನ ರೋಡ ನೋಡ್ರಿ,, ಚರಂಡಿ ನೀರು, ರೋಡದಲ್ಲೆ ಬರುದ ಅಷ್ಟೇ ಅಲ್ದ, ಮನಿ ಒಳಗೂ ಸಹ ನುಗ್ತಾಇದೇ. ಎಲ್ಲ ರೋಡಗಳು ಕೆರೆಯಂತಾಗಿವೆ, ಇವು ನಿಮಗ ಕಾಣ್ತಿಲ್ಲಾ ಅನಸ್ತ. ನೀವು ಮಾಡುದ ಏನ ಅಂದ್ರ, ಸರ್ಕಾರದ ಹಳೆ ಕಟ್ಟಡಗಳನ್ನು ಕೆಡುವುದು ಸರಿ ಪಡಿಸುವುದೇ ಇವರ ಸ್ಮಾರ್ಟ್ ಕೆಲಸ ಆಗಿದೆ ಹೊರತು, ಸ್ಮಾರ್ಟ್ ಸಿಟಿ ಮಾಡುದ ಇವರ ತಲೆ ಒಳಗ ಬರಂಗಿಲ್ಲಾ ಅನ್ಸತ್ ನೋಡ್ರೀ......
ಅಷ್ಟಕ್ಕೂ ನಮ್ಮ ಅಧಿಕಾರಿಗಳು ನಮ್ಮ ಹುಬ್ಳಿ ಧಾರವಾಡನ ಯವಾಗ ಸ್ಮಾರ್ಟ್ ಮಾಡ್ತಾರೋ, ನಾವು ಯವಾಗ ನೋಡ್ತೆವೋ ಎಂಬುದನ್ನ ಎಲ್ಲರೂ ಕಾಯ್ದು ಕಾಯ್ದು ನೋಡಬೇಕಾಗಿದೆ ನೋಡ್ರಿಪಾ.....!
Kshetra Samachara
27/09/2020 05:32 pm