ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದಾಯ ಹೇಳುತ್ತಿದೆ ಧಾರವಾಡದ ವಿದ್ಯಾಭವನ..!

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಧಾರವಾಡದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಕ್ಕದ ವಿಶಾಲವಾದ ಜಾಗದಲ್ಲಿ ವಿದ್ಯಾಭವನವೊಂದಿದೆ. ಅದು ನೋಡಲು ಸದ್ಯ ಭೂತ ಬಂಗಲೆಯಂತೆ ಕಾಣಿಸುತ್ತದೆ. ಆದರೆ, ಚಟಾಧೀಶರಿಗೆ ಅದು ಆಶ್ರಯ ತಾಣವಾಗಿದೆ.

ಹೌದು! ಸುಮಾರು ವರ್ಷಗಳಿಂದ ಈ ವಿದ್ಯಾಭವನ ಪಾಳು ಬಿದ್ದಿದೆ. ಸದ್ಯ ಈ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ವಿದಾಯ ಹೇಳುತ್ತದೆಯೋ ಗೊತ್ತಿಲ್ಲ. ಈ ಕಟ್ಟಡವನ್ನು ನೆಲಸಮಗೊಳಿಸಿ ಅದನ್ನು ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯದ್ವಾರವನ್ನಾಗಿ ಮಾಡಲು ಈ ಹಿಂದೆಯೇ ಚರ್ಚೆ ನಡೆಸಲಾಗಿದೆಯಂತೆ. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆ ನಡೆಸುವುದಕ್ಕಾಗಿ ಈ ವಿದ್ಯಾಭವನವನ್ನು ನಿರ್ಮಿಸಲಾಗಿತ್ತು. ಇದನ್ನು ಕ್ರೀಡಾಭವನ ಎಂತಲೂ ಕಡೆಯುತ್ತಾರೆ. ಯಾವಾಗ ಇದರ ಬಳಕೆ ಕಡಿಮೆಯಾಯಿತೋ ಅಂದಿನಿಂದ ಈ ಕಟ್ಟಡ ಅಳಿವಿನ ಅಂಚು ತಲುಪಿತು. ಈಗಾಗಲೇ ಹಲವು ಗೋಡೆಗಳು ಕುಸಿದು ಬಿದ್ದಿದ್ದು, ವಿದ್ಯಾಭವನದ ಹಾಲ್ ಗಬ್ಬೆದ್ದು ನಾರುತ್ತಿದೆ. ಪುಂಡ, ಪೋಕರಿಗಳಿಗೆ ಮದ್ಯಪಾನ ಮಾಡಲು ಇದು ಸೂಕ್ತ ಸ್ಥಳವಾಗಿ ಮಾರ್ಪಟ್ಟಿದೆ.

ಕಟ್ಟಡದ ಹೊರ ಹಾಗೂ ಒಳಭಾಗದಲ್ಲಿ ಎಲ್ಲಿ ನೋಡಿದರಲ್ಲಿ ಮದ್ಯದ ಬಾಟಲಿಗಳು ಬೇಕಾಬಿಟ್ಟಿಯಾಗಿ ಬಿದ್ದಿವೆ. ಒಂದು ರೀತಿಯಲ್ಲಿ ಇದು ಅನೈತಿಕ ಚಟುವಟಿಕೆಗಳ ತಾಣವಾದಂತಾಗಿದೆ. ಹೇಳಲು ವಿದ್ಯಾಭವನವಾದರೂ ಅದರ ಸೂಕ್ತ ನಿರ್ವಹಣೆಯಾಗದ ಕಾರಣ ಅದು ಈಗ ವಿದಾಯದ ಅಂಚು ತಲುಪಿದೆ. ವಿಶಾಲವಾದ ಸರ್ಕಾರಿ ಜಾಗದಲ್ಲಿರುವ ಈ ಕಟ್ಟಡವನ್ನು ನೆಲಸಮಗೊಳಿಸಿ ಆ ಜಾಗವನ್ನು ಇನ್ನಿತರೆ ಕಾರ್ಯಕ್ಕೆ ಬಳಕೆ ಮಾಡಿಕೊಂಡು ಪುಂಡ, ಪೋಕರಿಗಳಿಗೆ ಕಡಿವಾಣ ಹಾಕಲಿ ಎಂಬುದೇ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Nagesh Gaonkar
Kshetra Samachara

Kshetra Samachara

23/09/2020 11:31 am

Cinque Terre

35.31 K

Cinque Terre

3

ಸಂಬಂಧಿತ ಸುದ್ದಿ