ಹುಬ್ಬಳ್ಳಿ: ವೀರಶೈವ - ಲಿಂಗಾಯತ ಜಂಗಮರು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದು, ಸರ್ಕಾರದ ಸೌಲಭ್ಯ ಲೂಟಿ ಮತ್ತು ಪರಿಶಿಷ್ಟರಿಗೆ ವಂಚಿಸುವ ದುರುದ್ದೇಶದಿಂದ ಪ.ಜಾ ಯ ಬೇಡ ಜಂಗಮ, ಬುಡ್ಗ ಜಂಗಮ, ಮಾಲಾ ಜಂಗಮರೆಂದು ಜಾತಿ ಪ್ರಮಾಣಪತ್ರಕ್ಕಾಗಿ ಅಂಗಲಾಚುತ್ತಿರುವುದನ್ನು ವಿರೋಧಿಸಿ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಖಂಡಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿವಾದ ಧೋರಣೆಗಳು-ದೌರ್ಜನ್ಯಗಳು ಒಂದಡೆಯಾದರೇ ಅಂತಹ ಜಾತಿವಾದಿತನ, ದೌರ್ಜನ್ಯ ಮೆಟ್ಟಿ ಸಮಾನತೆಗೆ ಸಾಗುವ ಮಾರ್ಗದಲ್ಲಿ ದೌರ್ಜನ್ಯವೆಸಗಿದವರೇ ಇಂದು ಪ.ಜಾ ಯ ಜಾತಿಪ್ರಮಾಣಕ್ಕಾಗಿ ಹಾತೊರೆದು ನಿಂತಿರುವುದನ್ನು ಸಮತಾಸೇನಾ ಮತ್ತು ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ತೀವ್ರವಾಗಿ ಖಂಡಿಸುತ್ತದೆ ಎಂದರು.
Kshetra Samachara
18/07/2022 01:28 pm