ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಮುಂದೆ ಧರಣಿ ಕುಳಿತ ಬಡವರು

ಹುಬ್ಬಳ್ಳಿ: ಅವಳಿ ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು, ಬಡವರು ಮನೆಗಳು ಇಲ್ಲದೆ ಪರದಾಡುತ್ತಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರು ನಿವೇಶನ ರಹಿತರನ್ನು ಸರ್ವೇ ಮೂಲಕ ಗುರುತಿಸಿ, ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ನಿವೇಶನ ರಹಿತ ಹೋರಾಟ ಸಮಿತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎದುರಿಗೆ ಪ್ರತಿಭಟನೆ ಮಾಡಿದರು.

ಅವಳಿ ನಗರದಲ್ಲಿ ಸುಮಾರು ವರ್ಷಗಳಿಂದ ಆರ್ಥಿಕ ವಾಗಿ ಹಿಂದುಳಿದ ದುರ್ಬಲ ವರ್ಗದವರನ್ನು ಸರ್ವೇ ಮುಖಾಂತರ ಗುರಿತಿಸುವ ಕಾರ್ಯ ಆಗಿಲ್ಲ. ಆದ ಕಾರಣ ಹೋರಾಟ ಸಮಿತಿಯಿಂದ ಈ ಹಿಂದೆ ಆಯುಕ್ತರಿಗೆ ಹಾಗೂ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸರ್ವೇ ಮಾಡಿ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ಪರಿಚಯ ನಿವೇಶನ ಇಲ್ಲ ಎಂಬುದನ್ನು ಗುರಿತಿಸುವ ಪತ್ರ ಅಥವಾ ಕಾರ್ಡನ್ನು ಕೋಡಬೇಕು ಎಂದು ಪ್ರತಿಭಟನೆ ನಡೆಸಿದರು.

ಈ ಒಂದು ತಿಂಗಳಲ್ಲಿ ಮಹಾನಗರ ಪಾಲಿಕೆ ಸರ್ವೇ ಕಾರ್ಯವನ್ನು ಪ್ರಾರಂಭಿಸದಿದ್ದರೆ, ನಾವೇ ಲಿಖಿತ ರೂಪದಲ್ಲಿ ನಾವು ವಾಸಿಸುವ ಸ್ವ ವಿಳಾಸವನ್ನು ತಂದು ಮಹಾನಗರ ಪಾಲಿಕೆಗೆ ಕೋಡುತ್ತೆವೆ, ಇದರಿಂದ ಗುರುತಿನ ಕಾರ್ಡ ಕೋಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Edited By :
Kshetra Samachara

Kshetra Samachara

07/04/2022 07:15 pm

Cinque Terre

24.36 K

Cinque Terre

2

ಸಂಬಂಧಿತ ಸುದ್ದಿ