ಈಗಾಗಲೇ ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿಯಾಗುತ್ತಿದೆ. ಅದೇ ರೀತಿ ಹುಬ್ಬಳ್ಳಿಯ ಬಹುದೊಡ್ಡ ಮಾರುಕಟ್ಟೆ ದುರ್ಗದಬೈಲ್‌ದಲ್ಲಿನ ಸಮಸ್ಯೆಗಳು ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಕಾಡುತ್ತಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಮಾರುಕಟ್ಟೆ ಯಾವಾಗ ಸ್ಮಾರ್ಟ್ ಆಗುತ್ತೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ದುರ್ಗದ ಬೈಲ್ ಮಾರುಕಟ್ಟೆಗೆ ದಿನನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ವಾಹನ ಪಾರ್ಕ್ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ಸವಾರರು ಪಾರ್ಕ್ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಕಟ್ಟಡ ದುರ್ಗದ ಬೈಲ್‌ದಲ್ಲಿರುವ ಬ್ರಾಡವೇ ಬಿಲ್ಡಿಂಗ್ ಶಿಥಿಲಗೊಂಡಿದ್ದು, ಮರಳಿ ನಿರ್ಮಿಸುವಾಗ ಇಲ್ಲಿ ಶೌಚಾಲಯ ನಿರ್ಮಿಸಬೇಕು. ಕಟ್ಟಡದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕೆಂದು ವ್ಯಾಪಾರಸ್ಥರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಪಾಲಿಕೆಗೆ ಸಂಬಂಧಿಸಿದ ಯಾವುದೇ ಕಾಮಗಾರಿಯಾಗಲಿ, ಸ್ಥಳದಲ್ಲಿ ಕಾಮಗಾರಿ ನೀಲಿನಕ್ಷೆ, ಟೆಂಡರ್ ಪಡೆದ ಗುತ್ತಿಗೆದಾರರ ವಿವರ ಮತ್ತು ಅದರ ಅಂದಾಜು ಖರ್ಚಿನ ಸಂಪೂರ್ಣ ವಿವರಗಳುಳ್ಳ ಬೋರ್ಡ್‌ಅನ್ನು ಆ ಸ್ಥಳದಲ್ಲಿ ತಪ್ಪದೇ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Kshetra Samachara
19/02/2022 12:00 pm