ನವಲಗುಂದ : ಮಳೆಯ ಆರ್ಭಟಕ್ಕೆ ನವಲಗುಂದ ಭಾಗದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಧಾರಾಕಾರ ಮಳೆಗೆ ರಾತ್ರೋರಾತ್ರಿ ಅದೆಷ್ಟೋ ಮನೆಗಳು ಧರೆಗುರುಳಿವೆ. ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ರಾತ್ರಿ ದೂಡುವಂತಾಗಿತ್ತು. ನವಲಗುಂದ ಪಟ್ಟಣದ ಹಾಗೂ ತಾಲ್ಲೂಕಿನ ಹಲವೆಡೆ ಮನೆಗಳು ಬಿದ್ದಿವೆ.
ಪಟ್ಟಣದ ಬಸವೇಶ್ವರ ನಗರದಲ್ಲಿ ರಮೇಶ ಯಲ್ಲಪ್ಪಗೌಡ ಪಾಟೀಲ ಎಂಬುವವರ ಮನೆಯ ಒಂದು ಭಾಗದ ಗೋಡೆ ಬುಧವಾರ ಬೆಳಿಗ್ಗೆ ಕುಸಿದು ಬಿದಿದ್ದೆ. ಮನೆಯಲ್ಲಿದ್ದ ಕುಟುಂಬಸ್ಥರು ಅದೃಷ್ಟಾಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದೆ ಪರಿಸ್ಥಿತಿ ಅಮರಗೋಳ ಕ್ರಾಸ್ ಬಳಿಯಲ್ಲಿ ನಡೆದಿದ್ದು, ಮನೆ ಸಂಪೂರ್ಣ ನೆಲಕ್ಕಚ್ಚಿದೆ.
Kshetra Samachara
07/09/2022 10:13 pm