ಕುಂದಗೋಳ : ಪಟ್ಟಣದಲ್ಲಿ ಸಂಗ್ರಹಿಸಿದ ಕಸವನ್ನು ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಂಪೌಂಡ್ ಗೋಡೆ ಬಳಿ ಸುರಿದ ಪರಿಣಾಮ ವಾಹನ ಸವಾರರು ಹಾಗೂ ರೈತಾಪಿ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ, ಅಲ್ಲದೆ ತ್ಯಾಜ್ಯದಿಂದ ನಾಯಿ, ಕಾಗೆಗಳ ಕಾಟ ಸಹ ಅತಿಯಾಗಿದೆ.
ಪಟ್ಟಣ ಪಂಚಾಯಿತಿ ಘನ ತಾಜ್ಯ ವಿಲೇವಾರಿ ಘಟಕದಲ್ಲಿ ಪರ್ಯಾಯ ಕಾಮಗಾರಿ ನಡೆದ ಕಾರಣ ತಾತ್ಕಾಲಿಕವಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಸವನ್ನು ಅದೇ ಘನ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕ ವಿಲೇವಾರಿ ಮಾಡಿದ್ದಾರೆ.
ಆದ್ರೇ ನಾಯಿ ಹಾಗೂ ಕಾಗೆಗಳು ಆ ಕಸವನ್ನು ಎಲ್ಲೇಂದರಲ್ಲಿ ಎಳೆದಾಡಿ ರಸ್ತೆ ಮೇಲೆ ಚೆಲ್ಲುತ್ತಿವೆ. ನಿತ್ಯ ಕಸದಲ್ಲಿ ಬರುವ ಮೌಂಸ ತ್ಯಾಜ್ಯ ತಿಂದು ರೈತರ ಜಮೀನುಗಳಲ್ಲಿ ಸಹ ಓಡಾಟ ಆರಂಭಿಸಿ ಬೆಳೆ ಹಾನಿ ಮಾಡ್ತಾ ಇವೆ ಎನ್ನುತ್ತಿದ್ದಾರೆ ರೈತರು.
ಈಗಾಗಲೇ ವಿಪರೀತ ಕಸ ಇಲ್ಲಿ ಸಂಗ್ರಹವಾಗಿದ್ದು ನಿತ್ಯ ಈ ರಸ್ತೆಯಲ್ಲಿ ಓಡಾಡುವ ಜನರಿಗೆ ದುರ್ವಾಸನೆ ಭೀತಿ ಹಾಗೂ ರೈತರ ಜಮೀನುಗಳಿಗೆ ಪ್ಲ್ಯಾಸ್ಟಿಕ್ ಚೀಲ, ತ್ಯಾಜ್ಯ ಗಾಳಿಗೆ ಹಾರಿ ಬರುತ್ತಿವೆ ಎನ್ನುತ್ತಿದ್ದು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಸ್ಥಳೀಯರು.
Kshetra Samachara
18/07/2022 07:44 pm