ಕುಂದಗೋಳ : ನಮಸ್ಕಾರ ಕುಂದಗೋಳ ಮಹಾಜನತೆ ಮತ್ತ್ ಧೋ ಎಂದು ಸುರಿಯುವ ಮಹಾ ಮಳೆಗೆ ಹಂಚಿನಾಳ ಮಂದಿಗೆ ಕಟ್ಟಿ ಹಳ್ಳ ಬಾಳ್ ಸಮಸ್ಯೆ ತಂದೇತಿ ಅಂತಲ್ರೀ.
ಹೌದ ರೀ ! ಈ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವಾಗ ? ಈ ಹಳ್ಳದ ಕಡೆಗೆ ಗಮನ ಕೊಡ್ತಾರೋ ? ಪರಿಹಾರ ಮಾಡ್ತಾರೋ ಗೊತ್ತಿಲ್ಲ, ಆದ್ರೇ ಇಲ್ನೋಡ್ರಿ ಜನರ ದಾರುಣ ಪರಿಸ್ಥಿತಿ.
ಪಾಪಾ ಹಳ್ಳಿ ಜನರು ಬೈಕ್, ಟಾಟಾ ಎಸ್ ನಿತ್ಯ ಸಂಚಾರ ಮಾಡೋ ಸಾರ್ವಜನಿಕರ ಪರದಾಟ ನೋಡ್ರಿ, ಹಸುಗೂಸು ಕಟಗೊಂಡು ಬೈಕ್ ಏರಿ ತುಂಬಿ ಹರಿಯುವ ಹಳ್ಳ ದಾಟೋ ಈ ಮಹಿಳೆಯರ ಸ್ಥಿತಿ ನೋಡ್ರಿ, ಅಲ್ನೋಡ್ರಿ ಅಜ್ಜಾರ್ ಬೈಕ್ ತಳ್ಳಕೋತ್ ಹೇಂಗ್ ಹಳ್ಳಾ ದಾಟತಾರು, ಛೇ ಛೇ ನೋಡ್ರಿ ಟಾಟಾ ಏಸ್ ಹೋಯ್ತ್ ಹೋಯ್ತ್ ಹಳ್ಳಾ ದಾಟೆ ಹೋಯ್ತು ಅಬಾಬಾ ಮಳೆ ಆದ್ರೇ ಸಾಕು ಹಂಚಿನಾಳ, ಕುಬಿಹಾಳ, ಇಂಗಳಗಿ ಸೇರಿದಂತೆ ನಾನಾ ಹಳ್ಳಿಗರಿಗೆ ಇದೇ ಸಮಸ್ಯೆ ಅಪಾಯದ ಹಳ್ಳ ದಾಟಿ ದಡ ಸೇರೋದು.
ನಿತ್ಯ ಹಳ್ಳ ದಾಟಿ ದಡ ಸೇರುವ ಸಾರ್ವಜನಿಕರು ಪಾಡೇನ್ರೀ, ಯಾವುದಾದ್ರೂ ಅಪಾಯ ಆದ್ರೇ ಯಾರು ಹೊಣೆ ? ರೈತಾಪಿ ಜನ ಜಮೀನಿಗೆ ಓಡಾಡೋದು ಹೇಗೆ ? ಮಾನ್ಯ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಕೊಡಿ.
Kshetra Samachara
12/07/2022 10:57 am