ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಹೆದ್ದಾರಿ ರೆಡಿಯಾಗಿ 2 ವರ್ಷ ಕಳೆದರೂ ಗಿಡ ನೆಡಲು ಅಧಿಕಾರಿಗಳ ನಿರ್ಲಕ್ಷ್ಯ!

ಕಲಘಟಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಬೃಹತ್ ಮರಗಳನ್ನು ಕಡಿದು ತೆರವುಗೊಳಿಸಿರುವ ಅಧಿಕಾರಿಗಳು, ಈಗ ಕಾಮಗಾರಿ ಮುಗಿದು ಎರಡು ವರ್ಷಗಳೇ ಉರುಳಿದರೂ ಸಸಿಗಳನ್ನು ನೆಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಮಲೆನಾಡು ಎಂದು ಕರೆಯಲ್ಪಡುವ ಕಲಘಟಗಿ ಪಟ್ಟಣ ರಸ್ತೆಯ ಅಕ್ಕಪಕ್ಕ ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಮರಗಳನ್ನು ನೋಡುತ್ತಾ ಇದ್ದರೆ ಮಲೆನಾಡಿನ ಸೆರಗಿನಲ್ಲಿದ್ದ ಅನುಭವವಾಗುತ್ತಿತ್ತು. ಆದರೆ, ಹೆದ್ದಾರಿ ಕಾಮಗಾರಿಗಾಗಿ ಆ ಮರಗಳೆಲ್ಲ ಆಹುತಿಯಾಗಿ ಮರೆಯಾಗಿವೆ!

ಕೂಡಲೇ ಅಧಿಕಾರಿಗಳು ಹಸಿರಿಗಾಗಿ ಗಿಡಗಳನ್ನು ನೆಡುವ ಕೆಲಸ ಮಾಡಬೇಕು. ಕಾಳಜಿ ವಹಿಸಿ ಪರಿಸರ ರಕ್ಷಣೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಾಜ ಸೇವಕ ಪರಶುರಾಮ ಹೂಲಿಹೋಂಡ ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

24/06/2022 02:23 pm

Cinque Terre

16.55 K

Cinque Terre

0

ಸಂಬಂಧಿತ ಸುದ್ದಿ